Wednesday, June 7, 2023

Latest Posts

ಪ್ರಚಾರದ ವೇಳೆ ಕಲ್ಲೆಸೆತ: ಉನ್ನತ ಮಟ್ಟದ ತನಿಖೆಗೆ ಡಾ.ಜಿ.ಪರಮೇಶ್ವರ್ ಒತ್ತಾಯ

ಹೊಸದಿಗಂತ ವರದಿ,ತುಮಕೂರು

ಶುಕ್ರವಾರ ಸಂಜೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಭೈರೇನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಸಂದರ್ಭ ದಲ್ಲಿ ನಡೆದ ಮಾರಣಾಂತಕ ಹಲ್ಲೆ ಬಗ್ಗೆ ಉನ್ನತ ಮಟ್ಟದ ತನಿಖೆಯಲ್ಲಿ ಎಂದು ಮಾಜಿ ಉಪಮುಖ್ಯಮಂತ್ರಿ.ಮಾಜಿ ಗೃಹಪ್ರವೇಶದ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

ಸಿದ್ದಾರ್ಥ ನಗರದ ತಮ್ಮ ಗೃಹಕಚೇರಿಯಲ್ಲಿ ಶನಿವಾರ ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಚುನಾವಣಾ ಅಖಾಡದಿಂದ ತಮ್ಮನ್ನು ವಿಮುಖಗೊಳಿಸುವ ದೃಷ್ಟಿಯಿಂದ ಪ್ರಜಾಪ್ರಭುತ್ವ ತತ್ವದಡಿಯಲ್ಲಿ ಚುನಾವಣೆ ಎದುರಿಸಲಾಗದವರು ತಮ್ಮಮೇಲೆ ಕಲ್ಲುಗಳಿಗೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಕಳೆದ 35 ವರ್ಷಗಳಿಂದ ಜನಸೇವೆಯ ಸಲುವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ,ಇವರ ಗೊಡ್ಡುಬೆದರಿಕೆಗಳಿಗೆಹೆದರುವುದಿಲ್ಲ ಎಂದರು.ಜನರಿಗಾಗಿ ತಾನು ಎಲ್ಲದಕ್ಕೂ ಸಿದ್ದನಿದ್ದೇನೆ.ವೈದ್ಯರು ಒಪ್ಪಿದರೆ ನಾಳೆಯಿಂದಲೇ ಪ್ರಚಾರಕ್ಕೆ ಹೋಗುವೆ ಎಂದರು.
ಚುನಾವಣೆಯ ರಾಜಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ.ನಾನೊಬ್ಬ ಕ್ರೀಡಾಪಟು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವೆನು ಎಂದರು.

ಇದು ನನ್ನ ಮೇಲೆ ನಡೆದಿರುವ ಮೂರನೆಯ ಹತ್ಯಾ ಪ್ರಯತ್ನ, ಆದರೂ ನಾನು ಪೊಲೀಸ್ ರಕ್ಷಣೆಯನ್ನು ಕೋರುವುದು ನನ್ನ ಜನರೇ ನನ್ನ ರಕ್ಷಕರುಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!