Saturday, April 1, 2023

Latest Posts

ಆದಿತ್ಯ ಠಾಕ್ರೆ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಿನ್ನೆ ರಾತ್ರಿ ಶಿವಸೇನಾ (Shiv Sena) ನಾಯಕ ಆದಿತ್ಯ ಠಾಕ್ರೆ (Aaditya Thackeray) ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ.
ಈ ಕುರಿತು ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಮಾಹಿತಿ ನೀಡಿದ್ದು, ಮಹಲ್ಗಾಂವ್ ಗ್ರಾಮದಲ್ಲಿ ಠಾಕ್ರೆಯವರ ಶಿವಸಂವಾದ ಯಾತ್ರೆಯ ಸಂದರ್ಭದಲ್ಲಿ ರಮಾಬಾಯಿ ಅಂಬೇಡ್ಕರ್ ಜನ್ಮದಿನದ ಆಚರಣೆಯೊಂದಿಗೆ ಅವರ ಕಾರ್ಯಕ್ರಮ ಘರ್ಷಣೆಯಾದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತುದಾನ್ವೆ ಅವರು ಭದ್ರತಾ ಲೋಪಗಳ ಬಗ್ಗೆ ದೂರು ನೀಡಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಎರಡು ಗುಂಪುಗಳ ನಡುವೆ ಬಿರುಕು ಮೂಡಿಸುವ ಉದ್ದೇಶದಿಂದ ‘ಸಮಾಜ ವಿರೋಧಿ’ಗಳು ಕಲ್ಲುಗಳನ್ನು ಎಸೆದಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!