ಗಲಾಟೆ ನಿಯಂತ್ರಿಸಲು ಬಂದ ಪೊಲೀಸರ ವಾಹನದ ಮೇಲೆ ಕಲ್ಲುತೂರಾಟ: 15 ಮಂದಿಯ ಬಂಧನ

ಹೊಸದಿಗಂತ ವರದಿ, ಮೈಸೂರು:

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆಯನ್ನು ನಿಯಂತ್ರಿಸಲು ಬಂದ ಗರುಡ ಪೊಲೀಸ್ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲುತೂರಿ ಗಾಜುಗಳನ್ನು ಪುಡಿ ಮಾಡಿದ ಘಟನೆ ಮೈಸೂರಿನ ಬಿ.ಎಂ.ಶ್ರೀ ನಗರದ ಬಡಾವಣೆಯಲ್ಲಿ ನಡೆದಿದೆ.

ಘಟನೆಗೆ ಸಂಬoಧಿಸಿದoತೆ ಮೇಟಗಳ್ಳಿ ಠಾಣೆ ಪೊಲೀಸರು ೧೫ ಮಂದಿಯನ್ನ ಬಂಧಿಸಿದ್ದಾರೆ.

ಬಿ.ಎಂ.ಶ್ರೀ ನಗರದ ಚರ್ಚ್ ಬಳಿ ಜಾನ್ ಪೀಟರ್ ಎಂಬಾತನ ಪುತ್ರ ಹಾಗೂ ಹುಸೇನ್ ಎಂಬುವರ ಪುತ್ರರ ನಡುವೆ ಗಲಾಟೆಯಾಗುತ್ತಿತ್ತು.ಸ್ಥಳಕ್ಕೆ ಬಂದ ಹುಸೇನ್ ಮೇಲೆ ಜಾನ್ ಪೀಟರ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಈ ಬೆಳವಣಿಗೆ ನಂತರ ಕೆಲಸಮಯದಲ್ಲೇ ಹುಸೇನ್ ಹಾಗೂ ಕುಟುಂಬಸ್ಥರು ಸೇರಿದಂತೆ ೧೫ ಗೆ ಸಾಮಗ್ರಿಗಳನ್ನ ನಾಶಗೊಳಿಸಿದ್ದಾರೆ.

ಮಾಹಿತಿ ಅರಿತ ೧೧೨ ಗರುಡ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.ಈ ವೇಳೆ ಹುಸೇನ್ ಸೇರಿದಂತೆ ಕೆಲವರನ್ನ ಪೊಲೀಸರು ಠಾಣೆಗೆ ಕರೆದೊಯ್ಯಲು ಮುಂದಾದಾಗ ಕೆರಳಿದ ಯುವಕರು ಗರುಡ ವಾಹನದ ಮೇಲೆ ಕಲ್ಲು ತೂರಿದ್ದಾರೆ.

ಪರಿಣಾಮ ಗರುಡ ವಾಹನದ ಗಾಜು ಜಖಂ ಆಗಿದೆ.ಘಟನೆಗೆ ಸಂಬoದಿಸಿದoತೆ ಪೊಲೀಸರು ಹುಸೇನ್,ಸಾಯಿದಾ,ಆಸ್ಮಾ,ಹುಸೇನ್ ಬಿ,ಜುಬೇದ್,ಅಕ್ಟರ್,ಜಬೀ, ಸಮೀರ್,ಗುಲ್ದಾರ್,ಅಪ್ರೋ ಜ್ ಹಾಗೂ ರಿಜ್ವಾನ್ ಸೇರಿದಂತೆ ೧೫ ಮಂದಿ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್,ವಿಜಯನಗರ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಮೇಟಗಳ್ಳಿ ಠಾಣೆಯ ಇನ್ಸೆಕ್ಟರ್ ಶಾಂತರಾಮ್, ಪಿಎಸ್ಸೆ ಶಬರೀಶ್,ಜ್ಯೋತ್ಸಾ ರಾಜ್ ರವರು ಭೇಟಿ ನೀಡಿ ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಸಿಬ್ಬಂದಿಗಳಾದ ಮಧುಸೂಧನ್,ಶ್ರೀಶೈಲ ಹುಗ್ಗಿ,ಶಿವಕುಮಾರ್,ನರೋನ,ಮಹದೇವ್,ಮಣಿ,ಅಭಿ ಜಿತ್ ಹಾಗೂ ಹರೀಶ್ ರವರು ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!