ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಕೊಲ್ಲುವುದು: ಅಫ್ಘಾನ್ ನಲ್ಲಿ ಷರಿಯಾ ಕಾನೂನು ಜಾರಿಗೆ ತಾಲಿಬಾನ್​ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನಡೆಸುತ್ತಿದ್ದು, ಮುಖ್ಯಸ್ಥ ಮುಲ್ಲಾ ಹಿಬಾತುಲ್ಹಾ ಅಖುಂಡಝದಾ ಮಹತ್ವದ ಸೂಚನೆ ನೀಡಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಸಂಪೂರ್ಣ ಷರಿಯಾ ಕಾನೂನು ಜಾರಿಯಾಗುತ್ತಿದೆ. ಮಹಿಳೆಯರನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸುವ, ಬಡಿಗೆಯಿಂದ ಬಡಿದು ಸಾಯಿಸುವ ನಿಯಮವೂ ಜಾರಿಯಾಗುತ್ತಿದೆ.

20 ವರ್ಷ ಹೋರಾಡಿ ಆಡಳಿತ ಪಡೆದಿದ್ದೇವೆ. ಮುಂದಿನ 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಹೋರಾಡಿ ಸಂಪೂರ್ಣ ಷರಿಯಾ ಕಾನೂನು ತಂದು ದೇವರ ಆಜ್ಞೆ ಪಾಲಿಸುತ್ತೇವೆ ಎಂದಿದ್ದಾರೆ.

ಆಫ್ಘಾನಿಸ್ತಾನ ಪ್ರಜಾಪ್ರಭುತ್ವದ ರಾಷ್ಟ್ರವಲ್ಲ. ಈ ರಾಷ್ಚ್ರ ಷರಿಯಾ ಕಾನೂನು ಮೂಲಕ ಮುಂದೆ ಸಾಗಲಿದೆ. ನಾವು ದೇವರ ಪ್ರತಿನಿಧಿಗಳು. ದೇವರ ಆಜ್ಞೆಯನ್ನು ಪಾಲಿಸುವುದು ನಮ್ಮ ಕರ್ತವ್ಯ. ಅಂತಾರಾಷ್ಟ್ರೀಯ ಕಾನೂನು ಏನೇ ಇರಬಹುದು, ಆದರೆ ಷರಿಯಾ ಏನು ಹೇಳುತ್ತದೆ ಅನ್ನೋದರ ಮೇಲೆ ನಮ್ಮ ಆಡಳಿತ. ಮಹಿಳೆಯರ ಹಕ್ಕುಗಳು, ಮಾನವ ಹಕ್ಕುಗಳ ಕುರಿತು ಬೊಗಳೆ ನಮಗೆ ಬೇಕಿಲ್ಲ ಎಂದು ತಾಲಿಬಾನ್ ಮುಖ್ಯಸ್ಥ ಸೂಚಿಸಿದ್ದಾರೆ.

ಸುದೀರ್ಘ ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ತಾಲಿಬಾನ್ ಮುಖ್ಯಸ್ಥ ಇದೀಗ ಧ್ವನಿ ಸಂದೇಶವನ್ನು ಕಳುಹಿಸಿದ್ದಾರೆ.

ಈಗಾಗಲೇ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಶಿಕ್ಷಣ, ಹೆಣ್ಣುಮಕ್ಕಳು ಜಿಮ್ ಪಾರ್ಕ್‌ಗಳನ್ನು ಬಳಸುವುದು ನಿಷೇಧಿಸಲಾಗಿದೆ. ಇನ್ನು ಸರ್ಕಾರಿ ಉದ್ಯೋಗ ಸೇರಿದಂತೆ ಹೆಣ್ಣುಮಕ್ಕಳು ಉದ್ಯೋಗಕ್ಕೆ ತೆರಳುವುದಕ್ಕೂ ತಾಲಿಬಾನ್ ವಿರೋಧ ವ್ಯಕ್ತಪಡಿಸಿದೆ. ಹಿಬಾಜ್ ಕಡ್ಡಾಯ ಸೇರಿದಂತೆ ಹಲವು ನಿಯಮಗಳನ್ನು ತಾಲಿಬಾನ್ ಜಾರಿಗೆ ತಂದಿದೆ. ಇದೀಗ ಷರಿಯಾ ಕಾನೂನು ಜಾರಿಗೆ ಮುಂದಾಗಿರುವ ಬೆನ್ನಲ್ಲೇ ಆಫ್ಘಾನಿಸ್ತಾನದ ಸಾಮಾನ್ಯ ಪ್ರಜೆಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಉಸಿರುಗಟ್ಟುವ ವಾತಾವರಣದಲ್ಲಿ ದಿನ ದೂಡುತ್ತಿರುವ ಆಫ್ಘಾನಿಸ್ತಾನಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!