May 19, 2026
Tuesday, May 19, 2026
spot_img

ದಿನಭವಿಷ್ಯ: ನಿಮ್ಮ ತಪ್ಪಿಗೆ ಇತರರನ್ನು ದೂರಿ ಪ್ರಯೋಜನ ಇಲ್ಲ, ಪ್ರಶಂಸೆಗಾಗಿ ಕಾಯಿರಿ

ಮೇಷ
ನೀವು ಮಾಡುವ  ತಪ್ಪಿಗೆ ಇತರರನ್ನು ದೂರಬೇಡಿ. ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿದರೆ ಒಳಿತು.  ಕೌಟುಂಬಿಕ ಅಶಾಂತಿ.  
ವೃಷಭ
ವೃತ್ತಿಗೆ  ಸಂಬಂಧಿಸಿ ಪ್ರಮುಖ ಬದಲಾವಣೆ ಉಂಟಾದೀತು. ಹಣದ ವಿಚಾರದಲ್ಲಿ  ರಿಸ್ಕ್ ತೆಗೆದು ಕೊಳ್ಳಬೇಡಿ.  ಸಂಬಂಧದಲ್ಲಿ ಒಡಕು ಸಂಭವ.                
ಮಿಥುನ
ಕೆಲಸವೊಂದು ಅನಿರೀಕ್ಷಿತ  ಫಲ ನೀಡಲಿದೆ. ಒತ್ತಡ ನಿವಾರಣೆ. ಬಂಧುಗಳ ಜತೆ ಆತ್ಮೀಯ ಕಾಲಕ್ಷೇಪ. ಮಕ್ಕಳ ಸಾಧನೆಯ ತೃಪ್ತಿ.      
ಕಟಕ
ಕೆಲಸದ ಒತ್ತಡ ಅಧಿಕವಿದ್ದರೂ ನೀವು ವಿರಾಮ ಪಡೆಯಲು ಶಕ್ತರಾಗುವಿರಿ. ಖರ್ಚು ಅಧಿಕ ಮಾಡದಿರಿ. ಬಳಿಕ ಚಿಂತೆಗೆ ಕಾರಣವಾದೀತು.   ಸಿಂಹ
ಮನೆಯವರ ಹಿತಾಸಕ್ತಿಗೆ ಹೆಚ್ಚಿನ ಗಮನ ಕೊಡಿ. ನಿಮಗೆ ಅರಿವಿಲ್ಲದೇ ಬಿಕ್ಕಟ್ಟು ಬೆಳೆಯುತ್ತಿದೆ. ಎಲ್ಲರ ಜತೆ ಸಮಾಲೋಚನೆ ನಡೆಸಿ.     ಕನ್ಯಾ
ಸವಾಲುಗಳ ದಿನ. ನಿಭಾಯಿಸಲು ಸಮರ್ಥ. ಕೆಲವು ವಿಷಯಗಳಲ್ಲಿ ಸಮತೋಲನ ಸಾಧಿಸಿರಿ. ಏಕಪಕ್ಷೀಯ ಧೋರಣೆ ತಾಳದಿರಿ. ಧನವ್ಯಯ.          
ತುಲಾ
ನಿಮ್ಮ ಒಳ್ಳೆ ಕೆಲಸ ಯಾರೂ ಗಮನಿಸುತ್ತಿಲ್ಲ ಎಂಬ ಕೊರಗು ಬಿಡಿ. ಸೂಕ್ತ ಪ್ರಶಂಸೆ ಸಿಕ್ಕೇ ಸಿಗುವುದು. ಮನೆಯಲ್ಲಿ ಸೌಹಾರ್ದ ಪರಿಸರ.   ವೃಶ್ಚಿಕ
ಕಷ್ಟವೆಂದುಕೊಂಡ ಕೆಲಸ ಸಕಾಲದಲ್ಲಿ ಮುಗಿಸುವಿರಿ. ಆತ್ಮವಿಶ್ವಾಸ ವೃದ್ಧಿ. ಮನೆಯಲ್ಲಿ ಅಸಹಕಾರ ಎದುರಿಸುವಿರಿ. ಸಹನೆಯಿಂದಿರಿ.     ಧನು
ನಿಮ್ಮ ನಿರ್ವಹಣೆ ಇಂದು ಸುಧಾರಿಸಲಿದೆ.  ಅದೃಷ್ಟವೂ ಜತೆಗಿದೆ. ಕ್ಲಿಷ್ಟಕರ ಪರಿಸ್ಥಿತಿಯೊಂದು ಅಚಾನಕ್ ಪರಿಹಾರ ಕಾಣುವುದು.           ಮಕರ
ಇತ್ತೀಚೆಗೆ ಮೂಡಿದ್ದ ಕೆಲವು ಸಂಶಯಗಳಿಗೆ ಇಂದು ಪರಿಹಾರ ಸಿಗಲಿದೆ. ಮನಸ್ಸು ನಿರಾಳ. ಆರ್ಥಿಕ ಪರಿಸ್ಥಿತಿ ಉತ್ತಮ. ಖರ್ಚು ಹೆಚ್ಚಿದರೂ ಚಿಂತೆ ಕಾಡದು.      
ಕುಂಭ
ಮನವನ್ನು ಕಾಡುತ್ತಿರುವ ವಿಷಯ ಸರಿಯಾಗಿ ಇತ್ಯರ್ಥ ಪಡಿಸಿ. ಅದನ್ನು ಹಾಗೇ ಬೆಳೆಯಲು ಬಿಡಬೇಡಿ. ಕೌಟುಂಬಿಕ ಸಹಕಾರ.           ಮೀನ
ನಿಮ್ಮ ಪಾಲಿಗೆ ಗುಣಾತ್ಮಕ ಬದಲಾವಣೆ ಉಂಟಾಗಲಿದೆ. ಮನೆಯವರ ಮಾತಿಗೆ ರೇಗದಿರಿ. ಸಮಾಧಾನದ ಪ್ರತಿಕ್ರಿಯೆ ನೀಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !