ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಟೆಸ್ಲಾದ ಸಿಇಒ ಎಲಾನ್ ಮಸ್ಕ್ ಅವರು ವಿಶ್ವಕೋಶ ಎಂದು ಭಾವಿಸಲಾದ ಎಡಪಂಥೀಯ ನಿಯಂತ್ರಿತ ವಿಕಿಪೀಡಿಯಾಕ್ಕೆ ದೇಣಿಗೆ ನೀಡುವುದನ್ನು ನಿಲ್ಲಿಸುವಂತೆ ಸಾರ್ವಜನಿಕವಾಗಿ ಜನರಿಗೆ ಕರೆ ನೀಡಿದ್ದಾರೆ.
ʼPiratewiresʼ ನಲ್ಲಿ ಪ್ರಕಟವಾದ ತನಿಖಾ ವರದಿಯನ್ನು ಪ್ರಕಟಿಸುವ ಮೂಲಕ ದಯವಿಟ್ಟು ವಿಕಿಪೀಡಿಯಾಕ್ಕೆ ದೇಣಿಗೆ ನೀಡಬೇಡಿ ಎಂದು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿಗಳ ನಡುವಿನ ಯುದ್ಧವನ್ನು ಹೇಗೆ ತೋರಿಸಲಾಗಿದೆ ಎಂಬ ಸುದ್ದಿಯನ್ನು ಹಂಚಿಕೊಳ್ಳುವಾಗ ಮಸ್ಕ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
40 ವಿಕಿಪೀಡಿಯ ಸೂಪರ್ ಸಂಪಾದಕರು ಇಸ್ರೇಲ್ ವಿರುದ್ಧ ಮತ್ತು ಹಮಾಸ್‌ಗೆ ಬೆಂಬಲವಾಗಿ ಲೇಖನಗಳನ್ನು ಪ್ರಕಟಿಸುತ್ತಾರೆ. ಇಸ್ರೇಲಿ-ಪ್ಯಾಲೆಸ್ಟಿನಿಯನ್ ಸಂಘರ್ಷದ ವ್ಯಾಖ್ಯಾನಗಳನ್ನು ಬದಲಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳ ಪರವಾಗಿ ಎಡಿಟ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.