August 30, 2026
Sunday, August 30, 2026
spot_img

Stop Saying ‘NO’| ಮನಸ್ಸಿನ ಮಾತು ಕೇಳ್ಬೇಡಿ, ರಿಸ್ಕ್ ತಗೋಳಿ.. ನಿಮಗೆ ನೀವೇ ರಿಜೆಕ್ಟ್ ಮಾಡ್ಕೋಬೇಡಿ!

ನಮ್ಮಲ್ಲಿ ತುಂಬಾ ಜನಕ್ಕಿರೋ ದೊಡ್ಡ ಕಾಯಿಲೆ ಅಂದ್ರೆ ಇದೇ ನೋಡಿ. ಯಾವುದಾದರೂ ಒಂದು ಒಳ್ಳೆ ಕೆಲಸ ಸಿಕ್ಕರೆ, ದೊಡ್ಡ ಚಾನ್ಸ್ ಮುಂದೆ ಬಂದರೆ, ನಾವೇನ್ ಮಾಡ್ತೀವಿ ಗೊತ್ತಾ? ಬೇರೆಯವರು ಬಂದು ‘ನಿನಗೆ ಯೋಗ್ಯತೆ ಇಲ್ಲ’ ಅಂತ ಹೇಳೋಕ್ಕಿಂತ ಮುಂಚೆಯೇ, ನಾವೇ ನಮ್ ಮನಸ್ಸಲ್ಲಿ ‘ಛೇ! ಇದು ನಂಗೆ ಸಿಗಲ್ಲ ಬಿಡು, ನಾನ್ಯಾಕೆ ಟ್ರೈ ಮಾಡ್ಲಿ?’ ಅಂತ ನಮ್ ಆಸೆಗೆ ನಾವೇ ಬೆಂಕಿ ಇಟ್ಕೊಂಡು ಬಿಡ್ತೀವಿ.

ಈ ದುನಿಯಾದಲ್ಲಿ ನಿನ್ನನ್ನ ಕಾಲೆಳೆಯೋಕೆ, ನಿನ್ ಮುಖದ ಮೇಲೆಯೇ “ನಿನ್ನ ಕೈಯಲ್ಲಿ ಇದು ಆಗಲ್ಲ” ಅಂತ ‘ನೋ’ ಅನ್ನೋಕೆ ಹೊರಗಡೆ ಕೋಟಿ ಜನ ಕಾದಿದ್ದಾರೆ. ಅದಕ್ಕೆ ಅಂತಾನೇ ಕೆಲವರು ಹುಟ್ಟಿದ್ದಾರೆ. ಹಾಗಿರುವಾಗ, ಆ ‘ನೋ’ ಅನ್ನೋ ಕೆಲಸನ ನೀನ್ಯಾಕೆ ಫ್ರೀಯಾಗಿ ಮಾಡಿಕೊಡ್ತಿಯಾ?

ಯೋಚನೆ ಮಾಡಿ ನೋಡಿ. ಒಂದು ಒಳ್ಳೆ ಕಂಪನಿಯಲ್ಲಿ ಜಾಬ್ ಓಪನಿಂಗ್ ಇದೆ, ಅಥವಾ ನಿಮಗೊಂದು ಸೂಪರ್ ಬಿಸಿನೆಸ್ ಐಡಿಯಾ ಬಂದಿದೆ, ಇಲ್ಲಾ ನಿಮ್ಗೆ ಇಷ್ಟವಾದವರ ಹತ್ರ ಪ್ರಪೋಸ್ ಮಾಡಬೇಕಿದೆ… ತಕ್ಷಣ ನಮ್ ತಲೆಯಲ್ಲಿ ಓಡೋ ಮೊದಲ ಥಾಟ್ ಏನು? ಅಯ್ಯೋ, ಅವರಿಗೆ ನಾನ್ ಸೆಟ್ ಆಗಲ್ಲ, ಆ ಜಾಬ್ ನಂಗೆ ಸಿಗಲ್ಲ, ಬಿಸಿನೆಸ್ ಫ್ಲಾಪ್ ಆದ್ರೆ?. ಹೀಗೆ ನಾವೇ ಜಡ್ಜ್ ಆಗಿ, ನಾವೇ ಕಂಪ್ಲೇಂಟ್ ಬರೆದು, ನಾವೇ ನಮ್ ಕನಸಿಗೆ ಜೈಲು ಶಿಕ್ಷೆ ವಿಧಿಸಿಬಿಡ್ತೀವಿ.

ಟ್ರೈ ಮಾಡೋಕು ಮುಂಚೆಯೇ ಸೋಲನ್ನ ಒಪ್ಕೊಳ್ಳೋದು ಇದೆಯಲ್ಲ, ಅದು ನಿಜವಾಗ್ಲೂ ನಮಗೆ ನಾವೇ ಮಾಡ್ಕೊಳ್ಳೋ ದೊಡ್ಡ ದ್ರೋಹ. ಅಕಸ್ಮಾತ್ ನೀನು ಟ್ರೈ ಮಾಡಿದ್ರೆ ಏನಾಗಬಹುದು? ಹೆಚ್ಚೆಂದರೆ ರಿಜೆಕ್ಟ್ ಆಗ್ತಿಯಾ, ಅಷ್ಟೇ ತಾನೇ? ಅಟ್ಲೀಸ್ಟ್ ‘ಪ್ರಯತ್ನ ಪಟ್ಟೆ’ ಅನ್ನೋ ಸ್ಯಾಟಿಸ್ಫ್ಯಾಕ್ಷನ್ ಆದ್ರೂ ಇರುತ್ತೆ.

ನಿನ್ನ ಕೆಲಸ ಏನಿದ್ರೂ ಬಾಲ್‌ನ ಸಿಕ್ಸರ್‌ಗೆ ಬಾರಿಸೋಕೆ ಬ್ಯಾಟ್ ಬೀಸೋದು ಮಾತ್ರ. ಅದು ಬೌಂಡ್ರಿ ದಾಟುತ್ತೋ ಅಥವಾ ಫೀಲ್ಡರ್ ಕೈಗೆ ಹೋಗುತ್ತೋ, ಅದು ಆಮೇಲೆ ಗೊತ್ತಾಗುತ್ತೆ. ಬ್ಯಾಟ್ ಹಿಡಿಯೋ ಮುಂಚೆಯೇ ಔಟ್ ಅಂತ ನೀನೇ ಪೆವಿಲಿಯನ್‌ಗೆ ನಡೆದುಕೊಂಡು ಹೋದ್ರೆ ಹೆಂಗೆ?

ಅದಕ್ಕೇ ಹೇಳೋದು, ನಿಮ್ ಲೈಫ್‌ಗೆ ನೀವೇ ವಿಲನ್ ಆಗಬೇಡಿ. ಬೇರೆಯವರು ನಿಮ್ಗೆ ಬಾಗಿಲು ಮುಚ್ಚೋಕಿಂತ ಮುಂಚೆ ನೀವೇ ಕೈ ಕಟ್ಟಿ ಕೂರಬೇಡಿ. ದುನಿಯಾ ನಿಮ್ಗೆ “ನೋ” ಅನ್ನಲಿ, ಪರ್ವಾಗಿಲ್ಲ… ಆದ್ರೆ ಆ ಮಾತು ನಿಮ್ಮ ಬಾಯಿಂದ ಮಾತ್ರ ಯಾವತ್ತೂ ಬರಬಾರದು.

ಮಾಡ್ಬೇಕಾ? ಒಮ್ಮೆ ಧೈರ್ಯ ಮಾಡಿ ‘ಯೆಸ್’ ಅಂದು ಮುನ್ನುಗ್ಗಿ.. ಲಕ್ ಅನ್ನೋದು ಯಾವಾಗ ಚೇಂಜ್ ಆಗುತ್ತೆ ಅಂತ ಯಾರಿಗೂ ಗೊತ್ತಿರಲ್ಲ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar