September 4, 2026
Friday, September 4, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 79 | ಕ್ರಿಸ್ಪಿ ಹೊರಗಡೆ, ಸಾಫ್ಟ್ ಒಳಗಡೆ.. ಬೆಳಗಿನ ತಿಂಡಿಗೆ ಪರ್ಫೆಕ್ಟ್ ರೆಸಿಪಿ ಈ ರಾಗಿ ಪಡ್ಡು!

ರಾಗಿ ರೊಟ್ಟಿ, ಮುದ್ದೆ ತಿಂದು ಬೋರ್ ಆಗಿದ್ಯಾ? ಇವತ್ತೇ ಟ್ರೈ ಮಾಡಿ ಬಿಸಿ ಬಿಸಿ ರಾಗಿ ಪಡ್ಡು. ರೆಸಿಪಿ ವೆರಿ ಸಿಂಪಲ್:

ರಾಗಿ ಹಿಟ್ಟು

ರವೆ

ಮೊಸರು

ಈರುಳ್ಳಿ

ಹಸಿಮೆಣಸಿನಕಾಯಿ

ಕ್ಯಾರೆಟ್ ತುರಿ

ಸಾಸಿವೆ, ಜೀರಿಗೆ

ಕರಿಬೇವು, ಕೊತ್ತಂಬರಿ ಸೊಪ್ಪು

ಉಪ್ಪು

ಅಡುಗೆ ಎಣ್ಣೆ

ಮೊದಲು ಒಂದು ಬೌಲ್ ತಗೊಳ್ಳಿ. ಅದಕ್ಕೆ ರಾಗಿ ಹಿಟ್ಟು, ರವೆ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿ, ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿ. ಇದನ್ನ ಒಂದು 10 ರಿಂದ 15 ನಿಮಿಷ ಮುಚ್ಚಿಟ್ಟುಬಿಡಿ.

ಈಗ ಒಲೆ ಮೇಲೆ ಒಂದು ಸಣ್ಣ ಬಾಣಲೆ ಇಟ್ಟು, ಎರಡು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ ಸಿಡಿಸಿ. ಆಮೇಲೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಈಗ ಕಲಸಿಟ್ಟಿರೋ ರಾಗಿ ಹಿಟ್ಟಿನ ಬೌಲ್‌ಗೆ ಹುರಿದಿಟ್ಟುಕೊಂಡ ಒಗ್ಗರಣೆ, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಪಡ್ಡು ಹಿಟ್ಟಿನ ಹದಕ್ಕೆ ತನ್ನಿ.

ಒಲೆ ಮೇಲೆ ಪಡ್ಡು ಕಾವಲಿ ಇಟ್ಟು ಕಾಯಲು ಬಿಡಿ. ಕಾವಲಿ ಕಾದ ಮೇಲೆ ಸ್ವಲ್ಪ ಎಣ್ಣೆ ಸವರಿ. ಈಗ ತಯಾರಿಸಿದ ಹಿಟ್ಟನ್ನು ಕಾವಲಿ ಮೇಲೆ ಹಾಕಿ. ಗ್ಯಾಸ್ ಅನ್ನು ಸಣ್ಣ ಉರಿಯಲ್ಲಿ ಇಟ್ಟು, ಮೇಲೊಂದು ಮುಚ್ಚಳ ಮುಚ್ಚಿ 3-4 ನಿಮಿಷ ಬೇಯಿಸಿ. ಕೆಳಗಿನ ಭಾಗ ಗೋಲ್ಡನ್ ಬ್ರೌನ್ ಆದಮೇಲೆ, ಒಂದು ಚಮಚದಿಂದ ತಿರುವಿ ಹಾಕಿ. ಇನ್ನೊಂದು ಬದಿ ಕೂಡ ಚೆನ್ನಾಗಿ ಬೆಂದು ಕ್ರಿಸ್ಪಿ ಆಗುವವರೆಗೆ ಬೇಯಿಸಿ.

ಅಷ್ಟೇ.. ಬಿಸಿಬಿಸಿಯಾದ, ಹೆಲ್ತಿ ಹಾಗೂ ಟೇಸ್ಟಿ ರಾಗಿ ಪಡ್ಡು ರೆಡಿ! ಇದನ್ನು ಕಾಯಿ ಚಟ್ನಿ ಅಥವಾ ಖಾರ ಚಟ್ನಿ ಜೊತೆ ತಿಂದರೆ ಆಹಾ.. ಟೇಸ್ಟ್ ಸೂಪರ್!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !