ಶಾವಿಗೆ
ಕ್ಯಾರೇಟ್, ಬೀನ್ಸ್, ಹಸಿ ಬಟಾಣಿ, ಈರುಳ್ಳಿ
ಎಣ್ಣೆ, ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಹಸಿಮೆಣಸಿನಕಾಯಿ
ಉಪ್ಪು, ಅರಿಶಿನ, ನಿಂಬೆರಸ, ಕೊತ್ತಂಬರಿ ಸೊಪ್ಪು
ತುರಿದ ಕಾಯಿ
ಮೊದಲು ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಸ್ವಲ್ಪ ಉಪ್ಪು ಮತ್ತು ಒಂದೆರಡು ತೊಟ್ಟು ಎಣ್ಣೆ ಹಾಕಿ ಶಾವಿಗೆಯನ್ನು ಬೇಯಿಸಿಕೊಳ್ಳಿ. ಆಮೇಲೆ ನೀರನ್ನೆಲ್ಲ ಸೋಸಿ, ತಣ್ಣೀರು ಹಾಕಿ ಪಕ್ಕಕ್ಕೆ ಇಡಿ. ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಹಾಗೂ ಕರಿಬೇವು ಹಾಕಿ ಚಟಪಟ ಅಂತ ಒಗ್ಗರಣೆ ಮಾಡಿ. ಆಮೇಲೆ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಕ್ಯಾರೇಟ್, ಬೀನ್ಸ್, ಬಟಾಣಿ, ಅರಿಶಿನ ಮತ್ತು ಉಪ್ಪು ಹಾಕಿ ತರಕಾರಿ ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿ. ತರಕಾರಿ ಬೆಂದ ಮೇಲೆ, ಬೇಯಿಸಿಟ್ಟುಕೊಂಡ ಶಾವಿಗೆಯನ್ನು ಹಾಕಿ, ಎಲ್ಲವನ್ನೂ ಮಿಕ್ಸ್ ಮಾಡಿ. ಸಣ್ಣ ಉರಿಯಲ್ಲಿ 2 ನಿಮಿಷ ಮುಚ್ಚಿಡಿ. ಕೊನೆಯಲ್ಲಿ ಗ್ಯಾಸ್ ಆಫ್ ಮಾಡಿ, ಮೇಲೆ ಕೊತ್ತಂಬರಿ ಸೊಪ್ಪು, ತುರಿದ ತೆಂಗಿನಕಾಯಿ ಮತ್ತು ಸ್ವಲ್ಪ ನಿಂಬೆರಸ ಹಿಂಡಿದರೆ ಬಿಸಿಬಿಸಿ ವೆಜ್ ಶಾವಿಗೆ ಬಾತ್ ರೆಡಿ!



