June 21, 2026
Sunday, June 21, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 5 | ಮನೆಯಲ್ಲೇ ಮಾಡಿ ಕರಾವಳಿಯ ಸಾಂಪ್ರದಾಯಿಕ ಹಲಸಿನ ಹಣ್ಣಿನ ಸಿಹಿ ಅಪ್ಪ

ಮಳೆಗಾಲದಲ್ಲಿ ಮಾಗಿದ ಹಲಸಿನ ಹಣ್ಣಿನ ಸುವಾಸನೆ ಮನೆ ತುಂಬಿದರೆ, ಅದರಿಂದ ತಯಾರಿಸುವ ಸಾಂಪ್ರದಾಯಿಕ ಹಲಸಿನ ಹಣ್ಣಿನ ಅಪ್ಪ ಮತ್ತಷ್ಟು ವಿಶೇಷ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಜನಪ್ರಿಯವಾಗಿರುವ ಈ ಸಿಹಿ ತಿಂಡಿ, ಬೆಲ್ಲದ ಸಿಹಿ ಮತ್ತು ಹಲಸಿನ ಹಣ್ಣಿನ ವಿಶಿಷ್ಟ ರುಚಿಯಿಂದ ಎಲ್ಲರ ಮೆಚ್ಚುಗೆ ಪಡೆಯುತ್ತದೆ.

ಬೇಕಾಗುವ ಸಾಮಗ್ರಿಗಳು

ಹಲಸಿನ ಹಣ್ಣಿನ ತೊಳೆ – 10 ರಿಂದ 12
ಅಕ್ಕಿ – 1 ಕಪ್ (3-4 ಗಂಟೆ ನೆನೆಸಿದದ್ದು)
ತುರಿದ ತೆಂಗಿನಕಾಯಿ – ಅರ್ಧ ಕಪ್
ಬೆಲ್ಲ – ಅರ್ಧ ಕಪ್
ಏಲಕ್ಕಿ – 3 ರಿಂದ 4
ಉಪ್ಪು – ಚಿಟಿಕೆ
ಎಣ್ಣೆ ಅಥವಾ ತುಪ್ಪ – ಕರಿಯಲು

ಮಾಡುವ ವಿಧಾನ

ನೆನೆಸಿದ ಅಕ್ಕಿ, ತುರಿದ ತೆಂಗಿನಕಾಯಿ, ಬೆಲ್ಲ ಹಾಗೂ ಏಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಕತ್ತರಿಸಿದ ಹಲಸಿನ ಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತೊಮ್ಮೆ ತರಿತರಿಯಾಗಿ ರುಬ್ಬಿ. ಹಿಟ್ಟು ಸ್ವಲ್ಪ ದಪ್ಪವಾಗಿರಲಿ.

ರುಬ್ಬಿದ ಹಿಟ್ಟಿಗೆ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಸ್ವಲ್ಪ ಎಳ್ಳನ್ನೂ ಸೇರಿಸಬಹುದು.

ಈಗ ಅಪ್ಪದ ಕಾವಲಿಯಲ್ಲಿ ಸ್ವಲ್ಪ ತುಪ್ಪ ಹಾಕಿ, ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಯೂ ಕಂದು ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.

ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಅಪ್ಪ ಚಹಾ ಅಥವಾ ಕಾಫಿಯ ಜೊತೆಗೆ ಸವಿದರೆ ಅದರ ರುಚಿಯೇ ಬೇರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !