ರವೆ
ಮೊಸರು
ಈರುಳ್ಳಿ
ಟೊಮೇಟೊ
ಹಸಿಮೆಣಸಿನಕಾಯಿ
ಕ್ಯಾರೆಟ್
ಕೊತ್ತಂಬರಿ & ಕರಿಬೇವು
ಸಾಸಿವೆ, ಜೀರಿಗೆ
ಅಡುಗೆ ಸೋಡಾ
ಉಪ್ಪು & ಎಣ್ಣೆ
ಒಂದು ಪಾತ್ರೆಗೆ ರವೆ, ಮೊಸರು, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ. ತುಂಬಾ ತೆಳ್ಳಗೆ ಮಾಡಬೇಡಿ, ದೋಸೆ ಹಿಟ್ಟಿನ ಹದಕ್ಕೆ ಇರಲಿ. ಇದನ್ನ ಒಂದ್ 5 ನಿಮಿಷ ಪಕ್ಕಕ್ಕೆ ಇಡಿ. ಬಾಣಲೆಯಲ್ಲಿ ಒಂದೆರಡು ಸ್ಪೂನ್ ಎಣ್ಣೆ ಕಾಯಿಸಿ. ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸಿನಕಾಯಿ, ಈರುಳ್ಳಿ, ಟೊಮೇಟೊ ಮತ್ತು ಕ್ಯಾರೆಟ್ ಹಾಕಿ ಲೈಟಾಗಿ ಹುರಿದುಕೊಳ್ಳಿ. ಈಗ ಈ ಮಸಾಲೆಯನ್ನು ರವೆ ಹಿಟ್ಟಿನ ಜೊತೆ ಸೇರಿಸಿ. ಜೊತೆಗೆ ಕೊತ್ತಂಬರಿ ಸೊಪ್ಪು ಮತ್ತು ಒಂದು ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಹಂಚು ಸ್ಟವ್ ಮೇಲಿಟ್ಟು ಬಿಸಿ ಮಾಡಿ, ಹಂಚು ಕಾಯ್ದ ಮೇಲೆ, ಅದಕ್ಕೆ ಸ್ವಲ್ಪ ಎಣ್ಣೆ ಸವರಿ ತಯಾರಿಸಿದ ಹಿಟ್ಟನ್ನು ಹಾಕಿ ಹರಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 2-3 ನಿಮಿಷ ಬೇಯಿಸಿ. ಕೆಳಭಾಗ ಗೋಲ್ಡನ್ ಬ್ರೌನ್ ಆಗ್ತಿದ್ದಂತೆ ಅದನ್ನು ತೆಗೆದು ಪ್ಲೇಟ್ ಗೆ ಸರ್ವ್ ಮಾಡಿ.
ಅಷ್ಟೇ.. ಗರಿಗರಿಯಾಗಿ, ಒಳಗಡೆ ಸ್ಪಾಂಜ್ ಥರ ಮೆತ್ತಗಿರೋ ಬಿಸಿಬಿಸಿ ಮಸಾಲಾ ರವಾ ಅಪ್ಪಂ ರೆಡಿ!



