ದುಡ್ಡಿನ ಬಗ್ಗೆ ಪ್ರೈಮರಿ ಟೀಚರ್ ಹೇಳಿಕೊಟ್ಟ ಈ ಪಾಠ ಯಾರೂ ಮರೆಯುವಂತಿಲ್ಲ!

ಮಕ್ಕಳಿಗೆ ಬರೀ ಪುಸ್ತಕದಲ್ಲಿ ಸಿಗುವ ಪಾಠ ಮಾಡಿದರೆ ಸಾಲದು, ಜೀವನದ ಪಾಠ ಕೂಡ ಅವರಿಗೆ ಬೇಕು. ಸಣ್ಣವರಿಂದ ಅವರು ಏನನ್ನು ರೂಢಿ ಮಾಡಿಕೊಂಡು ಬರುತ್ತಾರೋ ಅದು ಅವರ ಜೀವನ ಮೌಲ್ಯವಾಗುತ್ತದೆ.

ಇದೆಲ್ಲಾ ಚೆನ್ನಾಗಿ ಗೊತ್ತಿದ್ದ ಪ್ರೈಮರಿ ಟೀಚರ್ ಒಬ್ರು ಮಕ್ಕಳಿಗೆ 50 ರೂಪಾಯಿ ನೋಟು ತೋರಿಸಿ ಇದು ಯಾರಿಗೆ ಬೇಕು? ಅಂತ ಕೇಳಿದ್ರು. ಈಗಿನ ಮಕ್ಕಳಿಗೆ ದುಡ್ಡಿನ ಬಗ್ಗೆ ಚೆನ್ನಾಗಿ ಗೊತ್ತು, ಪ್ರತಿಯೊಬ್ಬರೂ ನನಗೆ ನನಗೆ ಅಂತ ಕೈ ಎತ್ತಿದ್ರು.

ಇದೀಗ ಟೀಚರ್ ಆ ನೋಟನ್ನು ಪುಟ್ಟದಾಗಿ ಮಡಚಿ ಕೇಳಿದ್ರು, ಈಗ್ಲೂ ಈ ದುಡ್ಡು ಬೇಕಾ? ಎಲ್ಲರೂ ಮತ್ತೆ ಬೇಕು ಬೇಕು ಎಂದು ಹೇಳಿದರು.

ನಂತರ ನೋಟನ್ನು ಮುದ್ದೆ ಮಾಡಿ, ಕೆಳಗೆ ಇಟ್ಟರು. ಈಗಲೂ ಈ ದುಡ್ಡು ಬೇಕಾ? ಎಲ್ಲರೂ ಈಗಲೂ ಬೇಕು ಅಂದ್ರು. ಆ ನೋಟನ್ನು ಎತ್ತಿಕೊಂಡು, ಇಷ್ಟು ಕೊಳಕಾದ ನೋಟು ನಿಮಗ್ಯಾಕೆ ಬೇಕು ಎಂದು ಕೇಳಿದರು.
ಅದಕ್ಕೆ ಮಕ್ಕಳು ಹೇಳಿದರು ಈಗಲೂ ಅದಕ್ಕೆ ಬೆಲೆ ಇದೆ.

ಇದು ಖಂಡಿತಾ ಟೀಚರ್‌ಗೆ ಬೇಕಾದ ಉತ್ತರವೇ ಆಗಿತ್ತು. ನೀವು ಈ ನೋಟಿನ ರೀತಿ, ಜೀವನದಲ್ಲಿ ನಿಮಗೆ ನೂರಾರು ಕಷ್ಟ ಬರುತ್ತದೆ. ಹಿಂಡಿ ಹಿಪ್ಪೆ ಮಾಡುವ ನೋವು ಕಾಣುತ್ತದೆ. ಆದರೆ ನೀವು ನೋಟಿನ ರೀತಿ ಇರಬೇಕು, ನಿಮ್ಮ ಬೆಲೆ ಯಾವಾಗಲೂ ಒಂದೇ ರೀತಿ ಇರುತ್ತದೆ. ಕಷ್ಟಪಟ್ಟರೂ ನೀವು ನಿಮ್ಮ ಬೆಲೆ ಕಳೆದುಕೊಳ್ಳಬಾರದು ಎಂದರು!

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!