ಮರಳೇ ಈತನ ಆಹಾರ, 40ವರ್ಷದಿಂದ ಮರಳು ತಿಂದು ಬದುಕುತ್ತಿರುವ ಹರಿಲಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‌ಊಟ ಮಾಡುವಾಗ ಸಣ್ಣ ಕಲ್ಲು ಕಟುಂ ಅಂದರೇ ತುತ್ತು ಗಂಟಲೊಳಗೆ ಇಳಿಯಲ್ಲ. ಅಂಥದ್ದರಲ್ಲಿ ಮರಳೇ ಆಹಾರವಾಗಿ ಸೇವಿಸುವ ಈತ ನಿಜಕ್ಕೂ ವಿಸ್ಮಯವೇ ಸರಿ. ಉತ್ತರ ಪ್ರದೇಶ ರಾಜ್ಯದ ಗಂಜಾಮ್ ಜಿಲ್ಲೆಯ ಅರಂಗಾಪುರದಲ್ಲಿ ಜನಿಸಿದ ಹರಿಲಾಲ್ ಅವರಿಗೆ ಈಗ 68 ವರ್ಷ ವಯಸ್ಸು. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುವ ಈತ ಬರೋಬ್ಬರಿ ನಲವತ್ತು ವರ್ಷಗಳಿಂದ ಮರಳನ್ನೇ ಆಹಾರವಾಗಿ ತಿನ್ನುತ್ತಿದ್ದಾರಂತೆ.

ಬಾಲ್ಯದಿಂದಲೂ ಮರಳು ತಿನ್ನುವ ಹವ್ಯಾಸವಿರುವ ಹರಿಲಾಲ್‌, ತನ್ನ ಗ್ರಾಮಕ್ಕೆ ಹತ್ತಿರವಿರುವ ನದಿಯಿಂದ ಮರಳನ್ನು ಸಂಗ್ರಹಿಸುತ್ತಾನೆ.  ಮಳೆಗಾಲ ಬಂತೆಂದರೆ ನದಿಗೆ ಪ್ರವಾಹದ ನೀರು ಬರುವ ಮುನ್ನವೇ ಎರಡು-ಮೂರು ತಿಂಗಳಿಗೆ ಸಾಕಾಗುವಷ್ಟು ಮರಳಿನ ಮೂಟೆಗಳನ್ನು ಕಟ್ಟಿ ಮನೆಯಲ್ಲಿ ಸಂಗ್ರಹಿಸುತ್ತಾರೆ.

ಈ ಬಗ್ಗೆ ಸ್ವತಃ ಮಾತಾನಡಿರುವ ಹರಿಲಾಲ್ ಒಂದು ಕಾಲದಲ್ಲಿ ಸಾಕಷ್ಟು ಮರಳು ತಿನ್ನುತ್ತಿದ್ದೆ, ಈಗ ಸ್ವಲ್ಪ ಕಡಿಮೆ ಮಾಡಿದ್ದೇನೆ. ಇದುವರೆಗೂ ನನಗೆ ಯಾವುದೇ ಖಾಯಿಲೆ ಬಂದಿಲ್ಲ. ಕುಟುಂಬಸ್ಥರು, ಗ್ರಾಮಸ್ಥರು ಮತ್ತು ಸಹ ಕಾರ್ಮಿಕರು ಮರಳು ತಿನ್ನದಂತೆ ಪದೇ ಪದೇ ಹೇಳಿದರೂ ಸಹ ನಾನು ಮರಳು ತಿನ್ನೋದನ್ನು ಮಾತ್ರ ಬಿಟ್ಟಿಲ್ಲ ಅಂತಾರ. ಈ ನಡುವೆ ಉತ್ತರ ಪ್ರದೇಶದ ಮತ್ತೊಬ್ಬ ವ್ಯಕ್ತಿ ಮರಳು, ಸಣ್ಣ ಜಲ್ಲಿ ತಿಂದು ಜೀವನ ನಡೆಸುತ್ತಿದ್ದಾನೆ. ರಾಜ್ ಕಳೆದ 30 ವರ್ಷಗಳಿಂದ ಮರಳು ಮತ್ತು ಜಲ್ಲಿಕಲ್ಲುಗಳನ್ನು ತಿಂದು ಜೀವನ ಸಾಗಿಸುತ್ತಿದ್ದಾರೆ. ಆ ಗ್ರಾಮಸ್ಥರು ಆತನಿಗೆ ಮರಳು ಮನುಷ್ಯ ಎಂದು ನಾಮಕರಣ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!