ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಆಫೀಸ್, ಸ್ಕೂಲ್, ದೇವಸ್ಥಾ, ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಬಗ್ಗೆ ಕೇಳಿದ್ದೀರಿ, ಆದರೆ ಇಲ್ಲಿ ನೋಡಿ ಸಾಮಾನ್ಯ ಪ್ರದೇಶಗಳು ಹಾಗೂ ಉದ್ಯಾನವನಗಳಲ್ಲಿ ಓಡಾಡೋದಕ್ಕೂ ಇಂಥ ಉಡುಗೆ ಮಾತ್ರ ಧರಿಸಬೇಕು ಅನ್ನೋ ರೂಲ್ಸ್ ಬಂದಿದೆ.
ಗ್ರೇಟರ್ ನೋಯ್ಡಾದ ಸೊಸೈಟಿ ನಿವಾಸಿಗಳ ಕಲ್ಯಾಣ ಸಂಘ ತನ್ನ ನಿವಾಸಿಗಳಿಗೆ ನೈಟಿ ಹಾಗೂ ಲುಂಗಿ ಹಾಕಿಕೊಂಡು ಓಡಾಡಬೇಡಿ ಎಂದು ಒತ್ತಾಯಿಸಿದೆ.
ಲುಂಗಿ ಹಾಗೂ ನೈಟಿ ಧರಿಸಿ ಫ್ಲಾಟ್‌ನಿಂದ ಹೊರಬಾರದಂತೆ ನೊಟೀಸ್ ನೀಡಲಾಗಿದೆ, ಜನರ ಬಟ್ಟೆ ವೈಯಕ್ತಿಕ, ಸಮಾಜದಲ್ಲಿ ಒಡಕು ಮೂಡಿಸುವಂಥ ಬಟ್ಟೆಗಳಾದ್ರೆ ಬೇಡ ಎನ್ನಬಹುದು ಆದರೆ ನೈಟಿ ಲುಂಗಿ ಬೇಡ ಎನ್ನೋದು ಸರಿಯಲ್ಲಿ ಎಂದು ಸೊಸೈಟಿ ವಾಸಿಗಳು ಹೇಳ್ತಿದ್ದಾರೆ.
ನಿಮಗೆ ಗೌರವ ಸಿಗಬೇಕಾದ್ರೆ ಗೌರವಯುತವಾದ ಬಟ್ಟೆಗಳನ್ನು ಧರಿಸಿ ಎಂದು ಸೂಚನೆಯಲ್ಲಿ ಹೇಳಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೈಟಿಗಳು ಪುರುಷರಿಗೆ ಅನಾನುಕೂಲ ತರಿಸುತ್ತವೆ, ಇನ್ನು ಪುರುಷರ ಲುಂಗಿ ಮಹಿಳೆಯರಿಗೆ ಅನಾನುಕೂಲ ತರಿಸುತ್ತವೆ. ಹೀಗಾಗಿ ಇಬ್ಬರೂ ಇದನ್ನು ಒಪ್ಪಿ ಅನುಸರಿಸಬೇಕು ಎಂದು ಸೊಸೈಟಿ ಹೇಳಿದೆ.