ಚೀನಾದಲ್ಲಿ ಕುರಿಗಳ ವಿಲಕ್ಷಣ ನಡವಳಿಕೆ: 12ದಿನಗಳಿಂದ ವೃತ್ತಾಕಾರದಲ್ಲಿ ಸುತ್ತುತ್ತಿರುವ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಚೀನಾದಲ್ಲಿ ಕುರಿಗಳು ತುಂಬಾ ವಿಚಿತ್ರವಾಗಿ ವರ್ತಿಸುತ್ತಿವೆ. ನೂರಾರು ಕುರಿಗಳು ಸುಮಾರು 12 ದಿನಗಳ ಕಾಲ ವೃತ್ತದಲ್ಲಿ ಚಲಿಸುತ್ತಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. ಕುರಿಗಳ ವರ್ತನೆಗೆ ಕಾರಣ ಏನು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. ಉತ್ತರ ಚೀನಾದ ಮಂಗೋಲಿಯಾ ಸಮೀಪದ ಪ್ರದೇಶದಲ್ಲಿ ಇದು ಕಂಡುಬಂದಿದೆ ಎಂದು ಚೀನಾದ ಅಧಿಕೃತ ಮಾಧ್ಯಮ ಸಂಸ್ಥೆ ಪೀಪಲ್ಸ್ ಡೈಲಿ ಚೀನಾ ಹೇಳಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೊದ ಪ್ರಕಾರ, ಕೆಲವು ಹತ್ತಾರು ಕುರಿಗಳು ಗುಂಪಿನಲ್ಲಿ ಪ್ರದಕ್ಷಿಣಾಕಾರವಾಗಿ ಚಲಿಸುವುದನ್ನು ಕಾಣಬಹುದು. ಹೀಗೆ ನಿಲ್ಲದೆ ಒಂದೇ ಸಮನೆ ತಿರುಗುತ್ತಲೇ ಇವೆ. 12 ದಿನಗಳಿಂದ ಹೀಗೆಯೇ ತಿರುಗುತ್ತಿವೆ. ಈಗಲೂ ಹೀಗೆ ಸುತ್ತುತ್ತಲೇ ಇದ್ದಾವೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವರ್ತನೆಗೆ ಕೆಲವರು ಕುರಿಗಳು ಲಿಸ್ಟರಿಯೊಸಿಸ್ ಎಂಬ ಬ್ಯಾಕ್ಟೀರಿಯಾದ ಕಾಯಿಲೆಯಿಂದ ಬಳಲುತ್ತಿವೆ ಎಂದು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!