PARENTING | ʼಸ್ಟ್ರೇಂಜರ್‌-ಡೇಂಜರ್‌ʼ ಮಕ್ಕಳಿಗೆ ನೀವು ಮೊದಲು ಈ ವಿಷಯವನ್ನು ಹೇಳಿಕೊಡಿ

ಚಾಕೋಲೆಟ್‌ ಕೊಟ್ಟರೆ, ವಿಡಿಯೋ ಗೇಮ್ಸ್‌ ಕೊಡ್ತೀನಿ ಬಾ ಎಂದರೆ ಮಕ್ಕಳು ಯಾರ ಬಳಿಯಾದ್ರೂ ಹೋಗೋಕೆ ತಯಾರಾಗ್ತಾರೆ. ನಿನ್ನೆಯಷ್ಟೇ ಮನೆಯ ಓನರ್‌ ಮಗನೊಬ್ಬ ಮಗುವಿಗೆ ಚಾಕೋಲೆಟ್‌ ಕೊಡ್ತೀನಿ ಎಂದು ಹೇಳಿ ಕಾರ್‌ನಲ್ಲಿ ಕರೆದುಕೊಂಡು ಹೋಗಿ ರೇಪ್‌ ಮಾಡಿದ್ದಾನೆ. ಎಷ್ಟೋ ಪ್ರಕರಣಗಳಲ್ಲಿ ಮಕ್ಕಳಿಗೆ ಆಸೆ ಆಮಿಷ ಒಡ್ಡಿ ಜನ ಕಿಡ್ನ್ಯಾಪ್‌, ರೇಪ್‌ ಮಾಡುತ್ತಿದ್ದಾರೆ. ಸ್ಟ್ರೇಂಜರ್‌ ಡೇಂಜರ್‌ ಬಗ್ಗೆ ಮಕ್ಕಳಿಗೆ ಪಾಠ ಹೇಳಿಕೊಡಿ..

ಇವು ಡೇಂಜರ್‌ ಎಂದು ಹೇಳಿಕೊಡಿ..

ಒಂದು ರೂಲ್ಸ್‌ ಮಾಡಿ ಮಕ್ಕಳು ಯಾವಾಗ ಯಾವ ಸಮಯದಲ್ಲಿ ಎಲ್ಲಿಗೇ ಹೋದರೂ ಪೋಷಕರಿಗೆ ಹೇಳಿಯೇ ಹೋಗಬೇಕು. ಪರ್ಮಿಷನ್‌ ತೆಗೆದುಕೊಳ್ಳಬೇಕು. ಫೋನ್‌ ಇದ್ದರೆ ಅದನ್ನು ಬಳಕೆ ಮಾಡಬೇಕು.

ಏನಾದರೂ ಸಮಸ್ಯೆ ಅನಿಸಿದರೆ ಎಲ್ಲಿಗೆ ಹೋಗಬೇಕು, ಯಾವ ರೋಡ್‌ಗೆ ಹೋಗಬೇಕು, ಯಾರ ಬಳಿ ಸಹಾಯ ಕೇಳಬೇಕು ಎಂದು ಹೇಳಿಕೊಡಿ.

ಯಾರೇ ಚಾಕೋಲೆಟ್‌, ಬಿಸ್ಕೆಟ್‌ ಅಥವಾ ಏನನ್ನೇ ಕೊಡಲಿ ಅವರ ಜೊತೆ ಹೋಗಬಾರದು. ಇನ್ನು ಅಪರಿಚಿತರಿಂದ ಯಾವುದೇ ಸಹಾಯ ಪಡೆಯಬೇಡಿ, ಸಹಾಯ ಮಾಡಬೇಡಿ. ನಿಮ್ಮ ಮನಸ್ಸನ್ನು ಫಾಲೋ ಮಾಡೋದಕ್ಕೆ ಹೇಳಿಕೊಡಿ.

ಯಾವಾಗಾದರೂ ಅನ್‌ಕಂಫರ್ಟಬಲ್‌ ಅಥವಾ ಸಿಟ್ಯುಯೇಷನ್‌ನಲ್ಲಿ ಈ ಸಂದರ್ಭ ಚೆನ್ನಾಗಿಲ್ಲ, ಏನೋ ಕೆಟ್ಟದು ಆಗುತ್ತದೆ ಎಂದು ಅನಿಸಿದರೆ ಅಲ್ಲಿಂದ ಹೋಗಲು ಹೇಳಿ. ನಿಮ್ಮ ಸಿಕ್ಸ್ತ್‌ ಸೆನ್ಸ್‌ನ್ನು ನಂಬಿ ಎಂದು ಹೇಳಿ.

ದೊಡ್ಡವರು ಹೇಳಿದ್ದೆಲ್ಲಾ ಮಾಡಬೇಕಿಲ್ಲ. ಡೇಂಜರ್‌ ಎನಿಸಿದರೆ ನೋ ಎಂದು ಹೇಳಿ ಓಡಿಹೋಗಲು ಕಲಿಸಿ.

ಜಾಸ್ತಿ ಮಕ್ಕಳ ಗುಂಪಿನಲ್ಲಿ ಆಟವಾಡೋಕೆ ಹೇಳಿ. ಗುಂಪಿನಲ್ಲಿರುವ ಮಕ್ಕಳು ಸೇಫ್‌ ಆಗಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!