ಮಧ್ಯಪ್ರದೇಶದಲ್ಲಿ ಬೀದಿ ನಾಯಿ ಕಾಟ, ಒಂದೇ ದಿನ 548 ಮಂದಿಗೆ ಕಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಒಂದೇ ದಿನದಲ್ಲಿ 548 ಮಂದಿ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ.

ಮಂಗಳವಾರ ಮಧ್ಯಪ್ರದೇಶದ ಆಸ್ಪತ್ರೆಗಳಲ್ಲಿ ಒಟ್ಟಾರೆ 548 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿದೆ. ಆಂಟಿ ರೇಬೀಸ್ ಲಸಿಕೆಗಾಗಿ ಜನರು ಮೊರಾನ್, ಜಯ ಆರೋಗ್ಯ, ಹಜೀರಾ ಹಾಗೂ ದಾಬ್ರಾ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಾಯಿ ಕಚ್ಚಿದ ಪ್ರಕರಣಗಳು ದಿನೇ ದಿನೆ ಏರುತ್ತಿವೆ. ಪ್ರತಿದಿನ ನೂರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸುತ್ತಿವೆ. ಜನರು ಮಕ್ಕಳನ್ನು ವೃದ್ಧರನ್ನು ಹಾಗೂ ಅನಾರೋಗ್ಯಕ್ಕೆ ಒಳಗಾದವರನ್ನು ರಸ್ತೆಯಲ್ಲಿ ಒಬ್ಬಂಟಿ ಓಡಾಡಲು ಬಿಡದಿರುವುದು ಉತ್ತಮವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!