VIRAL VIDEO| ಫ್ಲೈಯಿಂಗ್ ಪಿಜ್ಜಾ ನೋಡಿದ್ದೀರಾ? ಒಂದು ಕ್ಷಣ ತಡ ಮಾಡದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೀದಿಬದಿ ವ್ಯಾಪಾರಿಗಳು ಜನರನ್ನು ಆಕರ್ಷಿಸಲು ವಿವಿಧ ಸಾಹಸಗಳನ್ನು ಮಾಡುತ್ತಾರೆ. ಸೇಲ್ಸ್ ಪರ್ಸನ್ ತೋರಿದ ಪ್ರತಿಭೆ ನೋಡಿದರೆ ಮೂಕವಿಸ್ಮಿತರಾಗುತ್ತೀರಿ.

ಕೆಲವು ಬೀದಿ ವ್ಯಾಪಾರಿಗಳು, ಐಸ್ ಕ್ರೀಮ್ ಮಾರುವವರೂ ಸಹ ಕೋನ್ ಹಿಡಿದು ಕೀಟಲೆ ಮಾಡುತ್ತಾರೆ. ಅಂತೆಯೇ ಪಿಜ್ಜಾ ಮಾರಾಟಗಾರನು ಪಿಜ್ಜಾ ಮಾಡುವ ಮೂಲಕ ಜನರನ್ನು ಆಕರ್ಷಿಸುತ್ತಾನೆ. ಹಿಟ್ಟನ್ನು ತೆಳುವಾಗಿ ಮಾಡಿ ಮೇಲಕ್ಕೆ ಎಸೆದು ನಂತರ ಕ್ಯಾಚ್‌ ಹಿಡಿದಿದ್ದಾನೆ. ಇವರ ಕೈಚಳಕ ನೋಡಿ ಎಲ್ಲರೂ ವಾವ್ ಎನ್ನುತ್ತಿದ್ದಾರೆ. ಟ್ವಿಟ್ಟರ್ ಪೇಜ್ ಸಿಸಿಟಿವಿ ಈಡಿಯಟ್ಸ್ ನಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಅದ್ಭುತ ಕೌಶಲ್ಯಗಳಿಂದ ಅನೇಕ ಜನರು ಆಶ್ಚರ್ಯಚಕಿತರಾಗಿದ್ದಾರೆ. ಆದರೆ ಇನ್ನು ಕೆಲವರು ಸೊಳ್ಳೆ, ನೊಣಗಳ ಜೊತೆಗೆ ಪಿಜ್ಜಾವನ್ನು ಹಾರಿಸುವ ಅಪಾಯವಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!