ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ: ಅಸ್ಸಾಂನಲ್ಲಿ ಶಾಸಕ ಸೇರಿ 36 ಮಂದಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಪಹಲ್ಗಾಮ್​ ಉಗ್ರ ದಾಳಿ ಬಳಿಕ ಕೆಲ ಕಿಡಿಗೇಡಿಗಳು ಪಾಕಿಸ್ತಾನದ ಪರವಾಗಿ ನಿಂತಿದ್ದಾರೆ. ಇಂತವರ ವಿರುದ್ಧ ಅಸ್ಸಾಂ ಸರಕಾರ ಕಠಿಣ ಕ್ರಮ ತೆಗೆದುಗೊಂಡಿದೆ.

ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ಪಾಕಿಸ್ತಾನ ಪರ ಭಾವನೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅಸ್ಸಾಂ ಪೊಲೀಸರು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ನ ಶಾಸಕ ಅಮೀನುಲ್ ಇಸ್ಲಾಂ ಮತ್ತು ಇತರ 35 ಮಂದಿಯನ್ನು ಬಂಧಿಸಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಗುರುವಾರ ತಿಳಿಸಿದ್ದಾರೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ, ಭಾರತೀಯ ನೆಲದಲ್ಲಿ ಪಾಕಿಸ್ತಾನದ ಪರ ಮಾತನಾಡುತ್ತಿರುವ ದೇಶದ್ರೋಹಿಗಳ ವಿರುದ್ಧ ನಮ್ಮ ಕಾನೂನು ಕ್ರಮ ಜರುಗಿಸುತ್ತಿದೆ. ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲೆ ಹದ್ದಿನಕಣ್ಣು ಇಡಲಾಗಿದೆ.ಸದ್ಯ ಬಂಧಿತರಲ್ಲಿ ಧಿಂಗ್ ವಿಧಾನಸಭಾ ಕ್ಷೇತ್ರದ AIUDF ಶಾಸಕ ಅಮೀನುಲ್ ಇಸ್ಲಾಂ ಇದ್ದಾರೆ. ಏಪ್ರಿಲ್ 30 ರಂದು, ಬೊಂಗೈಗಾಂವ್‌ನಲ್ಲಿ ನಜೀಬುಲ್ ಇಸ್ಲಾಂ ಮತ್ತು ಶ್ರೀಭೂಮಿಯಲ್ಲಿ ಸನಾಜ್ ಹುಸೇನ್ ಎಂಬ ಇಬ್ಬರು ವ್ಯಕ್ತಿಗಳನ್ನು ದೇಶದ್ರೋಹಿ ಹೇಳಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ಕಚಾರ್ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಶ್ರೀಭೂಮಿ ಜಿಲ್ಲಾ ಪೊಲೀಸರು ನಾಲ್ವರನ್ನು ಚಿರಾಂಗ್, ಗೋಲ್ಪಾರ, ಹೈಲಕಂಡಿ, ಕೊಕ್ರಝಾರ್, ಕಾಮರೂಪ (ಗ್ರಾಮೀಣ), ನಾಗಾಂವ್ ಮತ್ತು ತಮುಲ್ಪುರದಲ್ಲಿ ತಲಾ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಾರ್ಪೇಟಾ, ಬಿಸ್ವಾನಾಥ್, ದರ್ರಾಂಗ್, ಧುಬ್ರಿ, ಗೋಲಾಘಾಟ್, ಲಖಿಂಪುರ, ಮೋರಿಗಾಂವ್, ಸೋನಿತ್ಪುರ, ಶಿವಸಾಗರ್, ದಕ್ಷಿಣ ಸಲ್ಮಾರಾ ಮತ್ತು ಉದಲ್ಗುರಿ ಜಿಲ್ಲೆಗಳಿಂದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ನಾಗಾಂವ್ ಜಿಲ್ಲಾ ನ್ಯಾಯಾಲಯವು ಎಐಯುಡಿಎಫ್ ಶಾಸಕ ಅಮೀನುಲ್ ಇಸ್ಲಾಂರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!