ಹೊಸದಿಗಂತ ವಿಜಯಪುರ:
ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಮೈಕ್ರೋ ಫೈನಾನ್ಸ್ ಹಾವಳಿ ವಿಚಾರ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಫೈನಾನ್ಸ್ ಹಾವಳಿ ಅತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಠಿಣ ಕ್ರಮಕೈಗೊಳ್ಳಲು ಕ್ಯಾಬಿನೆಟ್‌ನಲ್ಲಿ ತಿಳಿಸಿದ್ದಾರೆ. ಹೀಗಾಗಿ ಅತ್ಯಂತ ಕಠಿಣ ಕಾನೂನು ತರುತ್ತವೆ ಎಂದರು.
ಮೈಕ್ರೊ ಫೈನಾನ್ಸ್ ಹಾವಳಿ ವಿರುದ್ಧ ಬಿಲ್ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವರ ಬಿಲ್ ಏನಾಯ್ತು ಎಂದು ಟಾಂಗ್ ನೀಡಿ, ಕುಮಾರಸ್ವಾಮಿ ಬಿಲ್ ವರ್ಕ್ ಆಗ್ತಿಲ್ಲ. ಹೀಗಾಗಿ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈ ಕಮಾಂಡ್‌ಗೆ ಬಿಟ್ಟಿದ್ದು, ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಧಿಕಾರ ಇರುತ್ತದೆ. ನನಗೆ ಕೇಳಿದರೆ ನಾನೇನು ಹೇಳಲಿ ? ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲಿನ್ ಚೀಟ್ ವಿಚಾರಕ್ಕೆ ಸಿಬಿಐ ಬಿಜೆಪಿಯರ ಮನೆದು ಅಂತಾ ?, ಲೋಕಾಯುಕ್ತರ ಮೇಲೆ ಬಿಜೆಪಿಗೆ ವಿಶ್ವಾಸ ಇಲ್ವಾ ಇವರಿಗೆ. ಲೋಕಾಯುಕ್ತರು ನಿರ್ಣಯ ಕೊಟ್ಟಮೇಲೆ ಸಿಬಿಐ ಕೇಸ್ ಏನು ಅನ್ನೊದು ಗೊತ್ತಾಗುತ್ತದೆ ಎಂದರು.