August 13, 2026
Thursday, August 13, 2026
spot_img

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಕಟ್ಟುನಿಟ್ಟಿನ ಅಭಯ: ಪಾರದರ್ಶಕತೆಗೆ ಪ್ರಿಯಾಂಕ್ ಖರ್ಗೆ ಆಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಗಸ್ಟ್ 2ರಂದು ಆಯೋಜಿಸಲಾಗಿರುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಉದ್ಯೋಗಾಂಕ್ಷಿಗಳಿಗೆ ಶುಭಾಶಯ ಕೋರಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಈ ಬಾರಿಯ ನೇಮಕಾತಿಯಲ್ಲಿ ಪಾರದರ್ಶಕತೆಗೆ ಅಗ್ರಸ್ಥಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದ್ದು, ಯುವಜನರ ಭವಿಷ್ಯದ ಜೊತೆ ಯಾವುದೇ ಚೆಲ್ಲಾಟವಾಡಲು ಬಿಡುವುದಿಲ್ಲ ಎಂದಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಯಮ

ಅಕ್ರಮಗಳಿಗೆ ಸಂಪೂರ್ಣವಾಗಿ ತಡೆ ಒಡ್ಡುವ ನಿಟ್ಟಿನಲ್ಲಿ ಪ್ರಶ್ನೆಪತ್ರಿಕೆಯ ಬಂಡಲ್ ಅನ್ನು ಪರೀಕ್ಷಾ ಕೇಂದ್ರ ತಲುಪಿದ ಬಳಿಕ, ಕೇಂದ್ರದ ಪ್ರಾಂಶುಪಾಲರು ಹಾಗೂ ಐದು ಜನ ಪರೀಕ್ಷಾರ್ಥಿಗಳ ಸಮ್ಮುಖದಲ್ಲಿಯೇ ಸೀಲ್ ತೆರೆಯಲು ಆದೇಶಿಸಲಾಗಿದೆ. ಹೈಟೆಕ್ ಸಾಧನಗಳು ಅಥವಾ ಅಕ್ರಮ ಉಪಕರಣಗಳನ್ನು ಕೇಂದ್ರದೊಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಧಾರ್ಮಿಕ ನಂಬಿಕೆಗಳಿಗೆ ಗೌರವ

ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಅಭ್ಯರ್ಥಿಗಳ ಧಾರ್ಮಿಕ ವಿಶ್ವಾಸಕ್ಕೆ ಧಕ್ಕೆಯಾಗದಂತೆ ವಿನಾಯಿತಿ ನೀಡಲಾಗಿದೆ. ಶಿವದಾರ, ಜನಿವಾರ ಹಾಗೂ ಮಾಂಗಲ್ಯಸರ ಮುಂತಾದ ಪವಿತ್ರ ಸಂಪ್ರದಾಯದ ವಸ್ತುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ನಕಲು ಅಥವಾ ಲೋಪ ಕಂಡುಬಂದಲ್ಲಿ ಅಭ್ಯರ್ಥಿಗಳು ನೇರವಾಗಿ ಮಾಹಿತಿ ನೀಡುವಂತೆ ಗೃಹ ಸಚಿವರು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !