ಆನ್‌ಲೈನ್ ಗೇಮಿಂಗ್‌ಗೆ ಲಗಾಮು ಹಾಕಲು ಬರಲಿದೆ ಖಡಕ್ ಕಾನೂನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ಆಟಗಳನ್ನು ಕೌಶಲ ಅಥವಾ ಅವಕಾಶವೆಂದು ವಿಂಗಡಿಸಲು ಮತ್ತು ಜೂಜಾಟಕ್ಕೆ ಅವಕಾಶ ಮುಕ್ತವಾಗಿರುವ ವೆಬ್‌ಸೈಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು, ನಿಷೇಧಿತ ಗೇಮ್‌ಗಳನ್ನು ನಿರ್ದಾಕ್ಷಿಣ್ಯ ಬ್ಲಾಕ್ ಮಾಡಲು ಮಾಹಿತಿ ತಂತ್ರಜ್ಞಾನ ಖಾತೆಯಡಿ ನಿಯಂತ್ರಣ ಮಂಡಳಿಯೊಂದನ್ನು ರಚಿಸಬೇಕು. ಯಾವ ಆನ್‌ಲೈನ್ ಆಟಗಳು ಕೌಶಲ ಕಲೆ, ಯಾವುದು ಜೂಜು ಎಂಬುದನ್ನು ತೀರ್ಮಾನಿಸುವ ಅಧಿಕಾರ ಪ್ರಸ್ತುತ ಮಂಡಳಿಗಿರಬೇಕು ಎಂದು ಸಂಸದೀಯ ನಿಯೋಗವು ಸರಕಾರವನ್ನು ಆಗ್ರಹಿಸಿದೆ.

ಅಪಾರ ಹಣ ನಷ್ಟಕ್ಕೆ ಹೇತುವಾಗಿ ,ಯುವಕರನ್ನು ಹುಚ್ಚರನ್ನಾಗಿಸುವ ಆನ್‌ಲೈನ್ ಆಟಗಳಿಗೆ ಕಡಿವಾಣ ಅನಿವಾರ್ಯವೆಂದು ಸಂಸತ್ತಿನ ಹಿರಿಯ ಅಧಿಕಾರಿಗಳ ನಿಯೋಗ ಹೇಳಿದೆ. ಮೋಜಿನ ಕ್ರಿಕೆಟ್‌ಗಳಿಗೆ ಹೆಸರಾಂತ ಡ್ರೀಮ್ 11 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್‌ನಂತಹ ಗೇಮಿಂಗ್ ಸ್ಟಾರ್ಟ್‌ಅಪ್‌ಗಳನ್ನು ಟೈಗರ್ ಗ್ಲೋಬಲ್ ಮತ್ತು ಸೆಖೊಯಾ ಕ್ಯಾಪಿಟಲ್‌ನಂತಹ ವಿದೇಶಿ ಹೂಡಿಕೆದಾರರು ಹುರಿದುಂಬಿಸುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ, ದೇಶದ ಯುವಶಕ್ತಿಯನ್ನು ಈ ಮೋಸದ ಜಾಲದಿಂದ ಪಾರು ಮಾಡಲು ಸಂಸತ್ತಿನ ಹಿರಿಯ ಅಧಿಕಾರಿಗಳ ತಂಡ ಕಳೆದ ಕೆಲವು ತಿಂಗಳಿಂದ ಪ್ರಯತ್ನಶೀಲವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!