ಶೂಟಿಂಗ್​ ಪೂರ್ಣಗೊಳ್ಳುವ ಮುನ್ನವೇ ‘ಲಿಯೋ’ ಗೆ ಸಖತ್ ಡಿಮ್ಯಾಂಡ್: 400 ಕೋಟಿ ರೂ. ವ್ಯವಹಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ದಳಪತಿ ವಿಜಯ್​ (Thalapathy Vijay) ಅವರು ನಟಿಸಿದ ‘ವಾರಿಸು’ ಸಿನಿಮಾ ಸೂಪರ್ ಹಿಟ್​ ಆಯಿತು. ಈ ಗೆಲುವಿನಿಂದಾಗಿ ಕಾಲಿವುಡ್​ನಲ್ಲಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಇದೀಗ ವಿಜಯ್​ ಅವರು ಲೋಕೇಶ್​ ಕಗನರಾಜ್​ (Lokesh Kanagaraj) ನಿರ್ದೇಶನದ ಹೊಸ ಸಿನಿಮಾ ‘ಲಿಯೋ’ ದಲ್ಲಿ ನಟಿಸಲಿದ್ದಾರೆ.

ಈ ಸಿನಿಮಾದ ಶೂಟಿಂಗ್​ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬರೋಬ್ಬರಿ 400 ಕೋಟಿ ರೂಪಾಯಿ ಬಿಸ್ನೆಸ್​ ಆಗಿದೆ ಎಂದು ವರದಿ ಆಗಿದೆ. ಆ ಕಾರಣದಿಂದ ‘ಲಿಯೋ’ (Leo Movie) ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

‘ಲಿಯೋ’ ಚಿತ್ರ 2023ರಲ್ಲೇ ರಿಲೀಸ್​ ಆಗಲಿದೆ. ಲೋಕೇಶ್​ ಕನಗರಾಜ್​ ಮತ್ತು ದಳಪತಿ ವಿಜಯ್​ ಕಾಂಬಿನೇಷನ್​ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಭರವಸೆ ಇದೆ. ಹಾಗಾಗಿ ಈ ಚಿತ್ರದ ಪ್ರೀ-ರಿಲೀಸ್​ ಬಿಸ್ನೆಸ್​ ಚೆನ್ನಾಗಿ ಆಗುತ್ತಿದೆ.

‘ಲಿಯೋ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು 120 ಕೋಟಿ ರೂಪಾಯಿ ನೀಡಿ ನೆಟ್​ಫ್ಲಿಕ್ಸ್​ ಖರೀದಿಸಿದೆ. ಇದರ ಕಿರುತೆರೆ ಪ್ರಸಾರ ಹಕ್ಕುಗಳು ಸನ್​ ಟಿವಿ ಬಳಿ ಇವೆ. ಅದರ ಬೆಲೆ 70 ಕೋಟಿ ರೂಪಾಯಿ ಎನ್ನಲಾಗಿದೆ. ಸೋನಿ ಮ್ಯೂಸಿಕ್​ ಕಂಪನಿಯು 18 ಕೋಟಿ ರೂಪಾಯಿ ನೀಡಿ ‘ಲಿಯೋ’ ಚಿತ್ರದ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಸಿನಿಮಾ ವಿತರಣೆ ಹಕ್ಕುಗಳು ಕೂಡ ಹಾಟ್​ ಕೇಕ್​ ರೀತಿ ಸೇಲ್​ ಆಗುತ್ತಿವೆ.

ಭಾರತ ವಿವಿಧ ರಾಜ್ಯಗಳಲ್ಲಿ ‘ಲಿಯೋ’ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಮುಗಿಬಿದ್ದಿದ್ದಾರೆ. ವಿದೇಶದಲ್ಲೂ ಡಿಮ್ಯಾಂಡ್​ ಜೋರಾಗಿದೆ. ಎಲ್ಲವನ್ನೂ ಸೇರಿಸಿದರೆ ಬರೋಬ್ಬರಿ 400 ಕೋಟಿ ರೂಪಾಯಿ ಹರಿದುಬಂದಿದೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ತ್ರಿಷಾ ಕೃಷ್ಣನ್​, ಮಿಸ್ಕಿನ್​, ಸಂಜಯ್​ ದತ್​, ಪ್ರಿಯಾ ಆನಂದ್​, ಗೌತಮ್​ ವಾಸುದೇವ ಮೆನನ್​ ಮುಂತಾದವರು ಕೂಡ ನಟಿಸುತ್ತಿದ್ದಾರೆ. ಅಕ್ಟೋಬರ್​ 19ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!