ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.5 ಎಂದು ದಾಖಲಾಗಿದ್ದು, ಇದು ಅತ್ಯಂತ ಪ್ರಬಲ ಭೂಕಂಪ ಎಂದು ಹೇಳಲಾಗಿದೆ.
ಜಪಾನ್‌ನ ಪಶ್ಚಿಮ ಕರಾವಳಿಯ ಪ್ರದೇಶಗಳಾದ ಇಶಿಕಾವಾ, ನಿಗಾಟಾ, ಟೊಯಾಮ ಮತ್ತು ಯಮಗಾಟಾದಲ್ಲಿನ ಜನರಿಗೆ ಶೀಘ್ರವೇ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಇಶಿಕಾವಾದ ನೋಟೋ ಪೆನಿನ್ಸುಲಾದಲ್ಲಿ ಐದು ಮೀಟರ್‌ಗಳಷ್ಟು ಅಲೆಗಳು ಬಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.