ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ಅವರು ನಿಯೋಜನೆಗೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರೌಡಿ ಶೀಟರ್‌ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಜೊತೆಗೆ ತಾವು ಯಾವ ರಾಜಕಾರಣಿಗಳ ಒತ್ತಡಕ್ಕೂ ಮಣಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕಳೆದ 7 ತಿಂಗಳುಗಳಿಂದ ಎಲ್ಲೆಂದರಲ್ಲಿ ಕೊಲೆ, ಚಾಕು ಇರಿತ, ಕಳ್ಳತನ, ಬೆದರಿಕೆ ಹಾಕೋದು ಸಾಮಾನ್ಯವಾಗಿ ಹೋಗಿ ಬಿಟ್ಟಿದ್ದವು. ಆದರೆ ಇದಿಗ ಅವಳಿ ನಗರದಲ್ಲಿ 1400 ಜನ ರೌಡಿಶೀಟರ್ ಗಳಿಗೆ ಕಮಿಷನರ್ ನೀರಿಳಿಸಿದ್ದಾರೆ.
ಅಧಿಕಾರ ವಹಿಸಿಕ್ಕೊಂಡು ಒಂದೆ ವಾರದಲ್ಲಿ ಪುಲ್ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಮುಂದಿನ ದಿನಗಳಲ್ಲಿ ನಿಟ್ಟುಸಿರು ಬಿಡುವ ವಾತಾವರಣ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ಮೂಡಿದೆ.
ಕಳೆದ ನಾಲ್ಕು ದಿನದಲ್ಲಿ ಬೆಂಡಿಗೇರಿ ಪೋಲಿಸ್ ಠಾಣೆ, ಹಳೆ ಹುಬ್ಬಳ್ಳಿ, ಧಾರವಾಡ ಶಹರ ಪೋಲಿಸ್ ಠಾಣೆ ಸೇರಿದಂತೆ ಎಲ್ಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಲಿಸರನ್ನು ಮಪ್ತಿಯಲ್ಲಿ ಬಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಕದಡುವವರನ್ನು ಪತ್ತೆ ಮಾಡಲಾಯಿತು. ಅವರೆಲ್ಲನ್ನು ಆಯಾ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳನ್ನ ಕರೆಸಿ ಎಲ್ಲರಿಗೂ ಮೇಷ್ಟ್ರು ರೀತಿಯಲ್ಲಿ ಕಮಿಷನರ್ ಪಾಠ ಮಾಡಿದ್ದಾರೆ. ಶನಿವಾರ ರಾತ್ರಿ 11 ಘಂಟೆಯವರೆಗೂ ಅವಳಿ ನಗರದಲ್ಲಿ ರೌಡಿ ಶೀಟರ್ ಗಳಿಗೆ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್ ಅವರಿಗೆ ಡಿಸಿಪಿ ನಂದಗಾವಿ, ಡಿಸಿಪಿ ರವಿಶ್ ,ಎಸಿಪಿ ಪ್ರಶಾಂತ ಸಿದ್ದನಗೌಡರ ಸಾಥ್ ಕೊಟ್ಟಿದ್ದಾರೆ. ಧಾರವಾಡ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಏರಿಯಾ ಡಾಮಿನೇಷನ್ ಮಾಡಿದ್ದಾರೆ. 100 ಜನ ಪೋಲಿಸ್ ಸಿಬ್ಬಂದಿಗಳನ್ನು ಬಳಸಿಕ್ಕೊಂಡು ಸುಮಾರು 250 ಜನರನ್ನು ವಶಕ್ಕೆ ಪಡೆದಿದ್ದಾರೆ.
ಮಪ್ತಿಯಲ್ಲಿ ಅವಳಿ ನಗರದ ರೌಡಿ ಶೀಟರ್ ಎಂಓಬಿ ,ಪೆಡ್ಲರ್ ಗಳ ಮೇಲೆ ಪೊಲೀಸರು ಹೆಚ್ಚು ನಿಗಾ ಇಟ್ಟಿದ್ದಾರೆ. ದೇವಸ್ಥಾನ, ಇನ್ನಿತರ ಸಾರ್ವಜನಿಕ ದಟ್ಟಣೆ, ಜನಸಂದನೆ ಇರುವ ಜಂಕ್ಷನ್ ಗಳಲ್ಲಿ, ಸ್ಲಂ ಗಳಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವವರಿಗೆ ಎಚ್ಚರಿಕೆ ನೀಡಲಾಗಿದೆ.
ನಿಮಗೆಲ್ಲ ಈಗ ಎಚ್ಚರಿಕೆ ಕೊಟ್ಟಿದ್ದೇವೆ. ಸರಿಹೋಗದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ರೌಡಿಶೀಟರ್ ಗಳು ರಾಜಕೀಯ ವ್ಯಕ್ತಿಗಳ ಹೆಸರು ಹೇಳಿದರೆ ನೋ ಕಾಂಪ್ರಾಮೈಸ್ ಎಂದಿರುವ ಪೊಲೀಸ್ ಆಯುಕ್ತರು ಅವಳಿ ನಗರದಲ್ಲಿ 1400 ಕ್ಕೂ ಹೆಚ್ಚು ರೌಡಿ ಶೀಡರ್‌ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿಸಲಾಗಿದೆ.