ಅಸಾನಿ ಅಬ್ಬರ, ಆಂಧ್ರಪ್ರದೇಶ ತತ್ತರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಸಾನಿ ಚಂಡಮಾರುತದ ಅಬ್ಬರ ಶುರುವಾಗಿದೆ. ಅದರ ಎಫೆಕ್ಟ್‌ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ನಿನ್ನೆ ಸಂಜೆ ಬಲವಾದ ಗಾಳಿ ಮಳೆ ಸುರಿದಿದೆ. ಶ್ರೀಕಾಕುಳಂ ಜಿಲ್ಲೆಯ ಕೆಲ ಭಾಗಗಳಲ್ಲಿ ನಿನ್ನೆ ಸಂಜೆ ಬಲವಾದ ಗಾಳಿ ಹಾಗೂ ಭಾರೀ ಮಳೆಯಾಗಿದೆ. ಅಸಾನಿ ಚಂಡಮಾರುತದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್, ವಿಶಾಖಪಟ್ಟಣಂ, ಜೈಪುರ ಮತ್ತು ಮುಂಬೈ ಸೇರಿದಂತೆ 10 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ನಿನ್ನೆಯೇ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿತ್ತು. ಕಡಲ ತೀರಗಳಲ್ಲಿ ಮತ್ತಷ್ಟು ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ ಹಾಗಾಗಿ ವಿಶಾಖಪಟ್ಟಣಂ ಬೀಚ್‌ಗೆ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!