August 20, 2026
Thursday, August 20, 2026
spot_img

ರಾಜ್ಯದಲ್ಲಿ ಮತ್ತೆ ಆರಂಭವಾಗಲಿದೆ ಸ್ಟೂಡೆಂಟ್‌ ಎಲೆಕ್ಷನ್‌: ಸಿಎಂ ಡಿಕೆಶಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಹಲವು ವರ್ಷದ ಹಿಂದೆ ನಿಲ್ಲಿಸಿದ್ದ ವಿದ್ಯಾರ್ಥಿ ಚುನಾವಣೆಯನ್ನು ಈ ವರ್ಷದಿಂದಲೇ ಆರಂಭ ಮಾಡಲಾಗುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಆರಂಭಿಸಲಾಗುತ್ತದೆ. ಆಗಸ್ಟ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಭಾಗಿಯಾಗೋಕೆ ಅರ್ಹತೆ?

ಭಾಗವಹಿಸುವ ವಿದ್ಯಾರ್ಥಿಗಳು ರೆಗ್ಯುಲರ್‌ ಆಗಿರಬೇಕು, ಕನಿಷ್ಠ 75% ಹಾಜರಾತಿ ಇರಬೇಕು. ಈ ವಿದ್ಯಾರ್ಥಿಗಳಿಗೆ ಯಾವುದೇ ಕ್ರಿಮಿನಲ್‌ ಬ್ಯಾಕ್‌ಗ್ರೌಂಡ್‌ ಇರಬಾರದು. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಪದಾಧಿಕಾರಿಯಾಗುವ ಅವಕಾಶ ಇರುತ್ತದೆ. ಇನ್ನು ವಿದ್ಯಾರ್ಥಿಗಳು ನೇರವಾಗಿ ಮತ ಹಾಕುತ್ತಾರೆ. ಪ್ರಜಾಪ್ರಭುತ್ವದ ಮೌಲ್ಯವನ್ನು ಹಾಗೂ ಭಾಷಣ, ಸಂವಹನಾ ಕೌಶಲ್ಯ ಕಲಿಯಲು ಇದು ಉತ್ತಮ ನಿರ್ಧಾರವಾಗಿದೆ.

ನಾನು ಝೂಮ್‌ ಕಾಲ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದೆ

ಸಿಎಂ ಡಿಕೆಶಿ ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನವನ್ನು ನೆನೆಸಿಕೊಂಡಿದ್ದಾರೆ. ನನಗೆ 2020ರ ಮಾ.10 ರಂದು ಸೋನಿಯಾ ಗಾಂಧಿ ಪಕ್ಷದ ಅಧಿಕಾರ ನೀಡಿದ್ದರು. ಆದರೆ ಆಗ ಕೊರೋನಾ ಸಮಯ. ದೊಡ್ಡ ಕಾರ್ಯಕ್ರಮದ ಬದಲು ಝೂಮ್‌ ಕಾಲ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದೆ. ನಿಮ್ಮ ವಿಶ್ವಾಸದಿಂದ ಸೇವೆ ಮುಂದುವರಿಸಿದ್ದೆ.ಕೋವಿಡ್ ಕಾಲದಲ್ಲಿ ಮನೆಯಿಂದ ಹೊರಗೆ ಹೋಗೋಕೆ ಆಗಿರಲಿಲ್ಲ. ಜೂಮ್‌ ಮೀಟಿಂಗ್ ಮೂಲಕವೇ ಅನೇಕ ಸಮಸ್ಯೆ ಪರಿಹರಿಸಿದ್ದೇವೆ.‌ ಕೋಟಿ ಕೋಟಿ ಹಣ ವೆಚ್ಚ ಮಾಡಿ ಫುಡ್ ಕಿಟ್ ಕೊಟ್ಟಿದ್ದೇವೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !