ಹೊಸದಿಗಂತ ವರದಿ ಅಂಕೋಲಾ:
ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೋರ್ವಳು ಮನೆಯಿಂದ ಕಾಣೆಯಾದ ಘಟನೆ ಘಟನೆ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ನಿವಾಸಿ ಹಾಲಿ ಅಂಕೋಲಾ ತಾಲೂಕಿನ ಶೆಟಗೇರಿಯಲ್ಲಿ ವಾಸವಾಗಿದ್ದ ಸಾವಿತ್ರಿ ಹನುಮಂತ ಪಂಚಪುತ್ರ(17) ಕಾಣೆಯಾದ ಯುವತಿಯಾಗಿದ್ದು ಅಕ್ಟೋಬರ್ 31 ರಂದು ರಾತ್ರಿ ಊಟ ಮಾಡಿ ಮಲಗಿದ್ದವಳು ರಾತ್ರಿ 10 ಗಂಟೆಯಿಂದ 11 ಗಂಟೆ ನಡುವಿನ ಅವಧಿಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊರಗೆ ಹೋಗಿ ಕಾಣಿಯಾಗಿದ್ದಾಳೆ ಅಥವಾ ಯಾರೋ ಅಪಹರಿಸಿಕೊಂಡು ಹೋಗಿರಬಹುದು ಎಂದು ವಿದ್ಯಾರ್ಥಿನಿಯ ತಂದೆ ಹನುಮಂತ ಕೃಷ್ಣಪ್ಪ ಪಂಚಪುತ್ರ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ವಿದ್ಯಾರ್ಥಿನಿ ಕುರಿತು ಮಾಹಿತಿ ದೊರಕಿದರೆ ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.