ಹೊಸದಿಗಂತ ವರದಿ ಮಂಗಳೂರು:
ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೋರ್ವ ಅನ್ಯ ಕೋಮಿನ ವಿದ್ಯಾರ್ಥಿನಿಗೆ ಬ್ಲೇಡ್ ನಿಂದ ಗೀರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಂಗಳವಾರ ನಡೆದಿದೆ.
ವಿದ್ಯಾರ್ಥಿಯು ತನ್ನದೇ ಧರ್ಮದ ವಿದ್ಯಾರ್ಥಿನಿಯೊಂದಿಗೆ ಪ್ರೀತಿ ಬೆಳೆಸಿಕೊಂಡಿದ್ದು ಅದಕ್ಕೆ ವಿದ್ಯಾರ್ಥಿನಿ ಅಡ್ಡಿಯಾಗಿದ್ದಾಳೆ ಎಂಬ ಗುಮನಿಯಿಂದ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ. ವಿದ್ಯಾರ್ಥಿನಿಗೆ ಕೈಗೆ ಗೀರಿದ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾಳೆ.
ಕಾಲೇಜು ಹೋಗುವ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಇದೇ ವಿಚಾರದಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿನಿ ದಾಖಲಾದ ಆಸ್ಪತ್ರೆಯ ಮುಂಭಾಗದಲ್ಲಿ ಒಂದು ಸಮುದಾಯದ ಜನ ಜಮಾಯಿಸಿದ್ದು, ಪೊಲೀಸರು ಅವರನ್ನು ಚದುರಿಸಿದ್ದಾರೆ. ಭದ್ರತೆ ಕೈಗೊಳ್ಳಲಾಗಿದೆ.