September 20, 2026
Sunday, September 20, 2026
spot_img

ಸಹಪಾಠಿಗಳಿಗೆ ತನ್ನದೇ ಮೂತ್ರ ಕುಡಿಸಿದ ವಿದ್ಯಾರ್ಥಿ: ಬಾಯಲ್ಲಿ ಕೆಟ್ಟ ಟೇಸ್ಟ್‌ ಇದ್ರೆ ಚಾಕೋಲೆಟ್‌ ತಿನ್ನಿ ಎಂದ ಪ್ರಿನ್ಸಿಪಾಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿದ್ಯಾರ್ಥಿಯೊಬ್ಬ ಬಾಟಲಿಯಲ್ಲಿ ತನ್ನ ಮೂತ್ರವನ್ನು ಶೇಖರಿಸಿ ಇತರ ಇಬ್ಬರು ವಿದ್ಯಾರ್ಥಿನಿಯರಿಗೆ ಕುಡಿಸಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲ ಚೇಷ್ಟೆಗಳಿಗೂ ಇತಿ ಮಿತಿ ಇರಬೇಕು. ವಿದ್ಯಾರ್ಥಿಗೆ ಕಠಿಣ ಶಿಕ್ಷೆ ನೀಡಿ ಬುದ್ಧಿ ಕಲಿಸಬೇಕು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಐದನೇ ತರಗತಿಯ ವಿದ್ಯಾರ್ಥಿಯೊಬ್ಬ ಈ ದುಸ್ಸಾಹಸಕ್ಕೆ ಕೈ ಹಾಕಿದ್ದು, ಇಬ್ಬರು ಸಹಪಾಠಿಗಳು ಮೂತ್ರ ಬಾಯಿಗೆ ಹಾಕಿಕೊಂಡು ತಕ್ಷಣ ಉಗಿದಿದ್ದಾರೆ. ನಂತರ ಪ್ರಿನ್ಸಿಪಾಲ್‌ ಬಳಿ ದೂರು ಹೇಳಲು ಹೋದಾಗ ಬಾಯಲ್ಲಿ ಕೆಟ್ಟ ಟೇಸ್ಟ್‌ ಇದ್ದರೆ ಹತ್ತು ರೂಪಾಯಿಯ ಚಾಕೋಲೆಟ್‌ ತಿನ್ನಿ ಸರಿ ಹೋಗುತ್ತದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಪೋಷಕರಿಗೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದು, ಶಾಲೆಗೆ ಬಂದು ಗಲಾಟೆ ಮಾಡಿದ್ದಾರೆ. ವಿದ್ಯಾರ್ಥಿ ಹಾಗೂ ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಿಶೋರ್ ಕುಮಾರ್ ಕನ್ಯಾಲ್ ಅವರು ತನಿಖೆ ನಡೆಸುವಂತೆ ತಹಶೀಲ್ದಾರ್ ಮತ್ತು ಬ್ಲಾಕ್ ಶಿಕ್ಷಣ ಅಧಿಕಾರಿ ಅವರಿಗೆ ಸೂಚನೆ ನೀಡಿದ್ದು, ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಈ ಕೆಟ್ಟ ಕೆಲಸ ಮಾಡಿದ ವಿದ್ಯಾರ್ಥಿಯನ್ನು ಕರೆಸಿ ವಿಚಾರಣೆ ನಡೆಸಿದಾಗ, ಇದು ಸ್ನೇಹಿತರೆಲ್ಲ ಸೇರಿ ನೀಡಿರುವ ಡೇರ್‌ ಆಗಿರಬಹುದು ಎನ್ನಲಾಗಿದೆ. ಇನ್ನು ವಿದ್ಯಾರ್ಥಿನಿಯರ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಗಲಾಟೆ ಹೆಚ್ಚಾಗದಂತೆ ತಡೆಯಲು ಆಡಳಿತ ಅಧಿಕಾರಿಗಳು ಭಾರೀ ಪೊಲೀಸ್ ಪಡೆಯೊಂದಿಗೆ ಗ್ರಾಮಕ್ಕೆ ಆಗಮಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !