ವಿದ್ಯಾರ್ಥಿಗಳು ಕಷ್ಟುಪಟ್ಟು ಓದಿ ಮನೆಗೆ ಆಸ್ತಿಯಾಗಿ ದೇಶ ನಿರ್ಮಾಣ ಮಾಡಬೇಕು: ಮಂಗೇಶ ಭೇಂಡೆ

ಹೊಸದಿಗಂತ ವರದಿ, ಹುಬ್ಬಳ್ಳಿ:

ವಿದ್ಯಾರ್ಥಿಗಳಲ್ಲಿ ಚಂಚಲತೆ ಜಾಸ್ತಿ ಇರುತ್ತದೆ. ಆದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಷ್ಟುಪಟ್ಟು ಓದಿ ಉತ್ತಮ ನಾಗರಿಕರಾಗಿ, ಮನೆಗೆ ಆಸ್ತಿಯಾಗಿ ದೇಶ ನಿರ್ಮಾಣ ಮಾಡಬೇಕು ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

ಶುಕ್ರವಾರ ಇಲ್ಲಿಯ ಗೋಕುಲ ರಸ್ತೆ ರೇಣುಕಾ ನಗರದಲ್ಲಿ ಭಾರತೀಯ ಶಿಕ್ಷಣ ಪ್ರಸಾರ ಸಮಿತಿಯ ಸಂಚಾಲಿತ ಕೇಶವ ವಿದ್ಯಾ ಕೇಂದ್ರದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ನೀಡಲಾದ ವಾಹನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿ ಗಿಳು ಬಿಟ್ಟು ಅಧ್ಯಯನ ಶೀಲರಾಗಬೇಕು. ಕೇಶವ ವಿದ್ಯಾ ಕೇಂದ್ರದ ಶಾಲೆ ಆರಂಭಗಿರುವ ಉದ್ದೇಶ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ವ್ಯಕ್ತಿ ನಿರ್ಮಾಣ ಮಾಡುತ್ತಿದೆ ಎಂದರು.

ಇಂದು ಶಾಲೆಯ ಮಕ್ಕಳಿಗೆ ಬರಲು ಸ್ವರ್ಣಾ ಜ್ಯುವೆಲರಸ್‌ನವರು ವಾಹನ ನೀಡಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಒಳ್ಳೆಯ ಅಂಕಗಳಿಸಿ ನಾಳೆ ಶಾಲೆಗೆ ಉತ್ತಮ ಹೆಸರು ಬಂದರೆ ಅವರಿಗೂ ಖುಷಿಯಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮೊದಲು ಸ್ವರ್ಣಾ ಜ್ಯೂವೆಲರ್ಸ್ ಪ್ರೈವೇಟ್ ಲಿಮಿಟೆಡ್ ಶಾಲೆಗೆ ನೀಡಲಾದ ವಾಹನ ಹಾಗೂ ರಾಷ್ಟ್ರೋತ್ಥಾನ ರಕ್ತ ಭಂಡಾರಕ್ಕೆ ನೀಡಲಾದ ಎರಡು ದ್ವಿಚಕ್ರ ವಾಹನಕ್ಕೆ ಪೂಜೆಸಲ್ಲಿಸಿ ಲೋಕಾರ್ಪಣೆಗೊಳಿಸಲಾಯಿತು.

ಸ್ವರ್ಣಾ ಜ್ಯೂವೆಲರ್ಸ್ ಪ್ರೈವೇಟ್ ಲಿಮಿಟೆಡ್ ಗೋಪಾಲಕೃಷ್ಣ ನಾಯಕ, ಸ್ವರ್ಣಾ ಗ್ರೂಪ ಚೇರಮನ್ ವಿ.ಎಸ್.ವಿ. ಪ್ರಸಾದ, ದತ್ತಮೂರ್ತಿ ಕುಲಕರ್ಣಿ, ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೇರ, ವೀರೇಂದ್ರ ಕೌಜಲಗಿ, ಡಾ.ಕ್ರಾಂತಿ ಕಿರಣ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!