ದಿಗಂತ ವರದಿ ಕೊಪ್ಪಳ:
ಜಿಲ್ಲೆಯ ಮೌಲಾನ ಆಜಾದ್ ಶಾಲೆಯಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲಾ ಕೊಠಡಿ ಪ್ರವೇಶಿಸಿದ್ದು, ಶಿಕ್ಷಕರು ಹೊರಗೆ ಕಳುಹಿಸಿದ್ದಾರೆ.
ಇಂದು ಶಾಲೆ ಆರಂಭವಾಗುತ್ತಿದ್ದಂತೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿ ಹಿಜಾಬ್ ಕಳಚುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ಶಾಲೆ ಒಳಗಡೆ ಪ್ರವೇಶಿಸಿದರು.