ಸ್ಟಫ್ಡ್ ಪನ್ನೀರ್ ಮೆಣಸಿನಕಾಯಿ ಸಬ್ಜಿ ರೆಸಿಪಿ ಮಾಡಿದ್ದೀರಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಪಾತಿ, ರೋಟಿ, ಪೂರಿ, ಪರಾಟ, ರೊಟ್ಟಿ ಇವುಗಳಿಗೆ ಏನ್‌ ಕಾಂಬಿನೇಷನ್‌ ಮಾಡ್ಬೇಕು ಅಂತ ಗೊತ್ತಾಗ್ತಿಲ್ವಾ..? ಈ ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ ರೆಸಿಪಿ ಮಾಡಿ ಆಲ್‌ ಇನ್‌ ಒನ್.‌ ಅನ್ನಕ್ಕೂ ಸಮೇತ ರುಚಿಯಾಗಿರುತ್ತದೆ.

ಬೇಕಾಗುವ ಪದಾರ್ಥ

6 ಮೆಣಸಿನಕಾಯಿ
1 ಕಪ್ ಪನೀರ್ (ತುರಿದ)
2 ಟೇಬಲ್ಸ್ಪೂನ್ ಈರುಳ್ಳಿ (ಕತ್ತರಿಸಿದ)
1 ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಕತ್ತರಿಸಿದ)
1/2 ಟೀಸ್ಪೂನ್ ಜೀರಿಗೆ ಪುಡಿ
1/2 ಟೀಸ್ಪೂನ್ ಮೆಣಸಿನ ಪುಡಿ
1/2 ಟೀಸ್ಪೂನ್ ಆಮ್ಚೂರ್
1/2 ಟೀಸ್ಪೂನ್ ಉಪ್ಪು
ಎಣ್ಣೆ, ಏಲಕ್ಕಿ,
1 ಟೀ ಸ್ಪೂನ್‌ ಜೀರಿಗೆ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಮೊಸರು

ತಯಾರಿಸುವ ವಿಧಾನ
ಒಂದು ಮಿಕ್ಸಿಂಗ್‌ ಬೌಲ್‌ಗೆ ತುರಿದ ಪನೀರ್‌ ಹಾಕಿಕೊಳ್ಳಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಮೆಣಸಿನ ಕಾಯಿ, ಆಮ್ಚೂರ್‌ ಪುಡಿ, ಎಲ್ಲವನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿ ಅದರ ಬೀಜಗಳನ್ನು ಗೆತೆದುಹಾಕಿ ಮಾಡಿ ಸ್ಟಫ್‌ ತುಂಬಿ. ಬಳಿಕ ಬಾಣಲೆ ಇಟ್ಟು ಎಣ್ಣೆ, ಜೀರಿಗೆ, ಏಲಕ್ಕಿ, ಈರುಳ್ಳಿ ಟೊಮ್ಯಾಟೊ ಹಾಕಿ ಚೆನ್ನಾಗಿ ಹುರಿಯಿರಿ. ತಣಿದ ಬಳಿಕ ಮಿಕ್ಸಿ ಮಾಡಿ. ನಂತರ ಅದೇ ಪ್ಯಾನ್‌ಗೆ ಜೀರಿಗೆ, ಏಲಕ್ಕಿ, ಪಲಾವ್‌ ಎಲೆ ಹಾಕಿ ಮೆಣಸಿನ ಪುಡಿ, ಕೊಬ್ಬಂಬರಿ ಪುಡಿ, ಜೀರಿಗೆ ಪುಡಿ, ಸ್ವಲ್ಪ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ಬಳಿಕ ಮಿಕ್ಸಿ ಮಾಡಿದ ಖಾರವನ್ನು ಬಾಣಲೆಗೆ ಸುರಿದು ಎಣ್ಣೆ ಮೇಲೆ ತೇಲುವವರೆಗೆ ಕಾಯಿಸಿ. ಗ್ರೇವಿ ಕಾದ ಬಳಿಕ ಸ್ಟಫ್‌ ಮಾಡು ಉರಿದಿದ್ದ ಮೆಣಸಿನಕಾಯಿಯನ್ನು ಗ್ರೇವಿಯೊಳಗೆ ಹಾಕಿ ಐದು ನಿಮಿಷ ಕುದಿಸಿದರೆ ಸ್ಟಫ್ಡ್ ಪನೀರ್ ಮೆಣಸಿನಕಾಯಿ ಸಬ್ಜಿ ರೆಸಿಪಿ ರೆಡಿ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!