January15, 2026
Thursday, January 15, 2026
spot_img

ಸ್ಟಂಟ್‌ಮ್ಯಾನ್ ಜಾಕಿ ಚಾನ್ ನಿಧನ? ವೈರಲ್‌ ಆಗ್ತಿದೆ ಹೀಗೊಂದು ಸುದ್ದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರಾಟೆ, ಮಾರ್ಷಲ್ ಆರ್ಟ್ಸ್ ಮತ್ತು ಇತರ ಸಾಹಸಗಳಿಗೆ ಹೆಸರುವಾಸಿಯಾಗಿದ್ದ ನಟ ಜಾಕಿ ಚಾನ್. ಇವರ ಸಿನಿಮಾಗಳೆಂದರೆ ಬಹುತೇಕರಿಗೆ ಅಚ್ಚು ಮೆಚ್ಚು.

ಆದ್ರೆ ಈಗ ಅವರಿಗೆ ವಯಸ್ಸು71 ದಾಟಿದ್ದು ಸಿನಿಮಾ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇತ್ತೀಚೆ ಗಷ್ಟೇ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂಬ ಸುದ್ದಿ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಫೇಕ್ ನ್ಯೂಸ್ ಎಂದು ದೃಢಪಟ್ಟಿದೆ.

ಆ್ಯಕ್ಷನ್-ಕಾಮಿಡಿ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಜಾಕಿ ಚಾನ್ ಅವರು ಇದುವರೆಗೆ 150ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2016 ರ ಗೌರವ ಆಸ್ಕರ್ (Oscars) ಪ್ರಶಸ್ತಿ ವಿಜೇತ, ಪ್ರಸಿದ್ಧ ಜಾಕಿ ಚಾನ್,ಕೆಲವು ತಿಂಗಳುಗಳ ಚಿಕಿತ್ಸೆಯ ನಂತರ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಕುಟುಂಬದಿಂದ ಕೂಡ ಈ ಬಗ್ಗೆ ಪ್ರತಿಕ್ರಿಯೆ ಶೀಘ್ರವೇ ಸಿಗುತ್ತದೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟು ಮಾಡಿದೆ.

ಈ ಬಗ್ಗೆ ಟ್ವಿಟ್ಟರ್ ಎಕ್ಸ್ ನಲ್ಲಿ ಡಿಜಿಟಲ್ ಗಾಲ್ ಮತ್ತು ರವಿ ಜಿ. ಮಹಾಜನ್ ಅವರು ಪೋಸ್ಟ್ ಹಂಚಿಕೊಂಡಿದ್ದು ಇದು ಫೇಕ್ ನ್ಯೂಸ್ ಎಂಬುದನ್ನು ದೃಢೀಕರಿಸಿದ್ದಾರೆ. ಈ ಮೂಲಕ ಈ ಸುದ್ದಿ ಸುಳ್ಳು ಎಂದು ಅಧಿಕೃತ ವಾಗಿ ಜಾಕಿ ಚಾನ್ ಅವರ ಫ್ಯಾನ್ಸ್ ಫಾಲೋವರ್ಸ್ ಪೇಜ್ ನಲ್ಲಿ ತಿಳಿಸಲಾಗಿದೆ.

ಜಾಕಿ ಚಾನ್ ಅವರು ಜೀವಂತವಾಗಿದ್ದಾರೆ, ಆರೋಗ್ಯವಾಗಿದ್ದಾರೆ. ಹಾಗಾಗಿ ಈ ಬಗ್ಗೆ ಅನಗತ್ಯ ಸುಳ್ಳು ಸುದ್ದಿ ಹಬ್ಬಿಸಬೇಡಿ. ಅವರು ಈಗ ತಮ್ಮ ಮುಂಬರುವ ಯೋಜನೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ವಯಸ್ಸು 71 ಆಗಿದ್ದರೂ ಈಗಲೂ ಆರೋಗ್ಯಯುತವಾಗಿದ್ದಾರೆ. ದಾರಿತಪ್ಪಿಸುವ ಪೋಸ್ಟ್‌ಗಳು ಆಧಾರರಹಿತವಾಗಿದ್ದು ಸುಳ್ಳು ಸುದ್ದಿಗೆ ಅಭಿಮಾನಿಗಳು ಗೊಂದಲ ಗೊಳ್ಳುವುದು ಬೇಡ ಎಂದು ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಬದುಕಿದ್ದಾರೆ ಎಂಬುದನ್ನು ದೃಢಪಡಿಸಲಾಗಿದೆ.

ಜಾಕಿ ಚಾನ್ ಸಾವಿನ ವದಂತಿಗಳು ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. 2015 ರಲ್ಲಿಯೂ ಇಂತಹದ್ದೇ ಒಂದು ಸುದ್ದಿ ಹರಿದಾಡಿತ್ತು. ಆಗ ಸ್ವತಃ ಅವರೇ ಈ ಬಗ್ಗೆ ಮಾತನಾಡಿ, ವಿಮಾನದಿಂದ ಇಳಿಯುತ್ತಿದ್ದಂತೆ ಈ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೆ. ಆದರೆ ಚಿಂತಿಸಬೇಡಿ! ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಹೇಳಿದರು.

Most Read

error: Content is protected !!