10 ದಿನಗಳಲ್ಲಿ ನಡು ಮೂಳೆ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ!

ಹೊಸದಿಗಂತ ವರದಿ,ಕಲಬುರಗಿ:

ನಗರದ ಬಾರೆಹಿಲ್ಸ್ ಬಳಿ ಇರುವ ಮನ್ನೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 10 ದಿನಗಳಲ್ಲಿ ನಡು ಮೂಳೆಗೆ ಸಂಬoಧಿಸಿದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದ 3 ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ.ಫಾರೂಕ್ ಮನ್ನೂರ ಹಾಗೂ ಮೂಳೆ ಶಾಸ್ತ್ರಜ್ಞರು ಡಾ. ವಿವೇಕ ವಿರೇಶ್ ತಿಳಿಸಿದರು.

ಆಸ್ಪತ್ರೆಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಅಪಘಾತಗಳಲ್ಲಿ ತೀವ್ರತರವಾಗಿ ನಡುಮುಳೆಗಳಿಗೆ ಪೆಟ್ಡಾಗಿ ಗಂಭೀರ ಗಾಯವಾಗಿದ್ದ 3 ಜನರಿಗೆ ಆಸ್ಪತ್ರೆಯ ನೂರಿತ ಮೂಳೆ ಶಸ್ತ್ರಚಿಕಿತ್ಸಾ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದರಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಬಹುತೇಕರಲ್ಲಿ ನಡು ಮೂಳೆ ಮುರಿದು ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ನಡು ಮೂಳೆ ಮುರಿದು ದಾಖಲಾದ ಅಪರೂಪದ 3 ರೋಗಿಗಳು ಜೀವನ ಮರಣ ಹೋರಾಡುತ್ತಿರುವಾಗ ಬದುಕುಳಿಸಲಾಗಿದೆ. ಇಲ್ಲಿ ಉನ್ನತ ಮಟ್ಟದ ವಿಶ್ವದರ್ಜೆಯ ಸೌಲಭ್ಯ, ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯ, ಅಡ್ವಾನ್ಸ್ ತಂತ್ರಜ್ಞಾನದಿಂದ ರೋಗಿಗಳ ಪಾಲಿಗೆ ಆಸ್ಪತ್ರೆ ಆಶಾಕಿರಣವಾಗಿದೆ ಎಂದು ವಿವರಿಸಿದರು.

ರೋಗಿಗಳಾದ ಅಲ್ಲಗುಡ ಗ್ರಾಮದ ರಂಜಿತ 24 ವರ್ಷದ ರೋಗಿ ಡಿ.1 ರಂದು ಕೆಲಸ ಮಾಡುವಾಗ ಆಯಾ ತಪ್ಪಿ ಕೆಳಗೆ ಬಿದ್ದು ನಡುಮೂಳೆಗೆ ಗಂಭೀರ ಪೆಟ್ಟಾಗಿದ್ದು, ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಲಾಯಿತು
ತಕ್ಷಣ ರೋಗಿ ಗುಣಮುಖರಾಗಿದ್ದಾರೆ.
ಅದೇ ರೀತಿ ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ ವಿದ್ಯಾನಂದ 55 ವರ್ಷ ವಯಸ್ಸಾಗಿದ್ದು ಡಿ 1ರಂದು ದ್ವಿಚಕ್ರದ ಮೇಲೆ ಪ್ರಯಾಣಿಸುತ್ತಿರುವಾಗ ರಸ್ತೆ ಅಫಘಾತವಾಗಿ ನಡುಮುಳೆ ಮುರಿದುಹೊಗಿದ್ದು ಶಸ್ತ್ರ ಚಿಕಿತ್ಸೆ ನಡೆಸಿ ರೋಗಿ ಗುಣಮುಖರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಾ. ಅನೀಲ್ ಕುಮಾರ ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!