ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು, ಕರ್ನಾಟಕದ ಶಿವಮೊಗ್ಗ ನಿವಾಸಿ ಮಂಜುನಾಥ್ ಸೇರಿ 27ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಅನ್ನೋ ಆಘಾತಕಾರಿ ವಿಚಾರ ಈಗ ಹೊರಬಂದಿದೆ.
ಈ ಭಯಾನಕ ದಾಳಿಯ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ, ಖಂಡಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ತಿಳಿದು ಆಘಾತವಾಗಿದೆ. ಈ ರೀತಿಯ ಮುಗ್ಧ ಜನರನ್ನು ಕೊಲ್ಲುವುದು ದುಷ್ಟತನ. ಅವರ ಕುಟುಂಬಗಳಿಗಾಗಿ ಪ್ರ್ರಾರ್ಥಿಸುತ್ತೇನೆ ಎಂದು ಅಕ್ಷಯ್ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Horrified to know of the terror attack on tourists in Pahalgam. Sheer evil to kill innocent people like this. Prayers for their families. 🙏
— Akshay Kumar (@akshaykumar) April 22, 2025