ಹೀಗಿದೆ ಜಗತ್ತಿನ ಪ್ಲಾಸ್ಟಿಕ್‌ ಸಮಸ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂದಿನ ಆಧುನಿಕ ಯುಗದ ಅತ್ಯಂತ ಅಪಾಯಕಾರಿ ಆವಿಷ್ಕಾರಗಳಲ್ಲಿ ಪ್ಲಾಸ್ಟಿಕ್‌ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಮಾನವನ ಅನುಕೂಲಕ್ಕೆಂದು ಸೃಷ್ಟಿಸಲ್ಪಟ್ಟ ಪ್ಲಾಸ್ಟಿಕ್‌ ಇಂದು ಇಡೀ ಭೂಮಿಯ ಮೇಲಿನ ಜೀವಿ ಸಂಕುಲಕ್ಕೇ ಮುಳುವಾಗಿ ಪರಿಣಮಿಸಿದೆ. ಮಣ್ಣಿನಲ್ಲಿ ಕರಗದ ರಾಸಾಯನಿಕ ತ್ಯಾಜ್ಯವಾದ ಪ್ಲಾಸ್ಟಿಕ್‌ ಅನ್ನು ವಿಲೇವಾರಿ ಮಾಡಲಾಗದೇ ಜಾಗತಿಕ ತಲೆ ನೋವಾಗಿ ಪರಿಣಮಿಸಿದೆ. ಜಗತ್ತೀಗ ಪ್ಲಾಸ್ಟಿಕ್‌ ತ್ಯಾಜ್ಯದಿಂದಾಗಿ ಉಸಿರುಗಟ್ಟುತ್ತಿದೆ ಹೀಗಾಗಿ ಇದನ್ನು ಸರಿಪಡಿಸಲು ವಿಶ್ವಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಚಿಂತಿಸುತ್ತಿದೆ.

ಕಳೆದ ವಾರವಷ್ಟೇ ಉರುಗ್ವೆಯಲ್ಲಿ ನಡೆದ ವಿವಿಧ ದೇಶಗಳ ನಡುವೆ ನಡೆದ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು ಜಾಗತಿಕ ಪ್ಲಾಸ್ಟಿಕ್ ಸಮಸ್ಯೆಯನ್ನು ಎದುರಿಸಲು ಕಾನೂನುಬದ್ಧವಾಗಿ ಬಂಧಿಸುವ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಔಪಚಾರಿಕವಾಗಿ ಮೊದಲ ಹೆಜ್ಜೆ ಇಡಲಾಗಿದೆ. ಇದು ವರ್ಷಗಳಲ್ಲಿ ಅತ್ಯಂತ ಪರಿಣಾಮಕಾರಿಯಾದ ಪರಿಸರ ಸಂಬಂಧೀ ಒಪ್ಪಂದವಾಗಿದೆ. ಆದರೆ ಈ ಒಪ್ಪಂದವು ಜಾರಿಗೆ ಬರಬೇಕಾದರೆ ಸ್ಫರ್ಧಾತ್ಮಕ ಹಿತಾಸಕ್ತಿಗಳೊಂದಿಗೆ ಸೆಣೆಸಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಒಂದೆಡೆ, ಕಠಿಣ ದೇಶಗಳು ಮತ್ತು ಪರಿಸರ ಕಾರ್ಯಕರ್ತರು ಪ್ಲಾಸ್ಟಿಕ್‌ ನ ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ಪ್ಲಾಸ್ಟಿಕ್ ಉದ್ಯಮದ ಒಕ್ಕೂಟಗಳು ಪ್ಲಾಸ್ಟಿಕ್ ಮರುಬಳಕೆಯತ್ತ ಗಮನಹರಿಸುವಂತೆ ಕರೆ ನೀಡುತ್ತಿವೆ.‌ ಈ ಕುರಿತು ಗಮನಿಸಬೇಕಾದ ಕೆಲ ಅಂಕಿ ಅಂಶ ಗಳು ಇಲ್ಲಿವೆ
– ಒಟ್ಟೂ 45 ರಾಷ್ಟ್ರಗಳು ಪ್ಲಾಸ್ಟಿಕ್‌ ಮಾಲಿನ್ಯವನ್ನು ಕೊನೆಗೊಳಿಸಲು ಹೈ ಆಂಬಿಷನ್ ಒಕ್ಕೂಟದ ಸದಸ್ಯರಾಗಿವೆ
– ಒಟ್ಟೂ ಪ್ಲಾಸ್ಟಿಕ್‌ ತ್ಯಾಜ್ಯದಲ್ಲಿ 50 ಶೇಕಡಾದಷ್ಟು ಏಕಬಳಕೆಯ ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ಕೂಡಿವೆ
– ಪ್ಲಾಸ್ಟಿಕ್‌ಗಳನ್ನು ಉತ್ಪಾದಿಸಲು 2,400 ಕ್ಕೂ ಅಧಿಕ ರಾಸಾಯನಿಕಗಳನ್ನು ಬಳಸಲಾಗುತ್ತದೆ
– 2021 ರಲ್ಲಿ US ನಲ್ಲಿ 5 ಶೇ.ದಷ್ಟು ಪ್ಲಾಸ್ಟಿಕ್‌ ಮರುಬಳಕೆ ಮಾಡಲಾಗಿದೆ ಇದು 2014 ರ 9.5ಶೇ.ಕ್ಕಿಂತ ಕಡಿಮೆಯಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!