ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೂಲದ ಎಐ ಸ್ಟಾರ್ಟ್‌ಪ್ ಸಿಇಒ ಸುಚನಾ ಸೇಠ್ ತನ್ನ ಮಗನನ್ನು ಕೊಂದು 19 ಗಂಟೆಗಳ ಕಾಲ ಮಗುವಿನ ಮೃತದೇಹದ ಜೊತೆ ಕಾಲ ಕಳೆದಿದ್ದರು ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ.
ಬೆಂಗಳೂರಿನಿಂದ ಗೋವಾಕ್ಕೆ ಜನವರಿ 6ರಂದು ಸುಚನಾ ವಾಪಾಸ್ ಆಗಿದ್ದರು. ಅಪಾರ್ಟ್‌ಮೆಂಟ್‌ಗೆ ಹೋದ ಎರಡು ಗಂಟೆಯಲ್ಲಿ ಸುಚನಾ ಮಗುವನ್ನು ಸಾಯಿಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಜನವರಿ 7ರಂದು ಮಧ್ಯರಾತ್ರಿ ಸುಚನಾ ಚೆಕ್‌ಔಟ್ ಮಾಡಿದ್ದಾರೆ. ಮಗು 36 ಗಂಟೆಗಳ ಹಿಂದೆ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದು, ಒಟ್ಟಾರೆ 19 ಗಂಟೆ ಮಗುವಿನ ಮೃತದೇಹವನ್ನು ಸುಚನಾ ರೂಮ್‌ನಲ್ಲಿ ಇಟ್ಟುಕೊಂಡಿದ್ದರು.
ಇನ್ನು ಸುಚನಾಗೆ ಮಗುವನ್ನು ಬೆಳೆಸುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದ ಕಾರಣ ಪೋಷಕರ ಚಿಕಿತ್ಸೆ ಎನ್ನುವ ಮಾನಸಿಕ ಥೆರಪಿಗೂ ಒಳಗಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.