ತೈವಾನ್ ಸುತ್ತ ಚೀನಾ ಮಿಲಿಟರಿ ವಿಮಾನ, ನೌಕೆಗಳ ದಿಢೀರ್ ಸಂಚಾರ: ರಕ್ಷಣಾ ಸಚಿವಾಲಯ ಫುಲ್ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೈವಾನ್‌ನ ಸುತ್ತ ಚೀನಾ ಮಿಲಿಟರಿ ವಿಮಾನ, ನೌಕೆಗಳ ಸಂಚಾರ, ಜಾಗತಿಕ ಮಟ್ಟದಲ್ಲಿ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.

ಮೂಲಗಳ ಮಾಹಿತಿ ಪ್ರಕಾರ, ಏಳು ಮಿಲಿಟರಿ ವಿಮಾನಗಳು ಹಾಗೂ ಐದು ಯುದ್ಧನೌಕೆಗಳು ಶನಿವಾರ ಬೆಳಿಗ್ಗೆ 6 ರಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೆ ತೈವಾನ್ ಸುತ್ತ ಕಾರ್ಯಾಚರಣೆ ನಡೆಸಿದೆ. ಇದನ್ನು ತೈವಾನ್‌ನ ರಕ್ಷಣಾ ಸಚಿವಾಲಯ ಪತ್ತೆ ಹಚ್ಚಿದೆ. ಈ ಪೈಕಿ ಏಳು ಮಿಲಿಟರಿ ವಿಮಾನಗಳ ಪೈಕಿ ಒಂದು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿ ತೈವಾನ್‌ನ ನೈಋತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ.

ಇದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ 6 ಗಂಟೆಯವರೆಗೂ ಚೀನಾದ 9 ವಿಮಾನಗಳು ಹಾಗೂ ಐದು ಹಡಗುಗಳು ತೈವಾನ್ ಸುತ್ತ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ಬೆಳವಣಿಗೆಗಳ ಬೆನ್ನಿಗೇ ತೈವಾನ್ ಅಲರ್ಟ್ ಆಗಿದ್ದು, ಚೀನಾದ ಆಕ್ರಮಣಕಾರಿ ವರ್ತನೆ ಮೇಲೆ ಸಶಸ್ತ್ರ ಪಡೆಗಳು ನಿಗಾ ಇರಿಸಿವೆ. ಜೊತೆಗೆ ಯುದ್ಧ ಗಸ್ತು ವಿಮಾನಗಳು, ಹಡಗುಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ಸನ್ನದ್ಧಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!