ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಮಳೆಯಾಗಿದೆ . ನಗರದ ವಿವಿಧೆಡೆ ವರುಣಾರ್ಭಟ ಜೋರಾಗಿದೆ. ಹೀಗಾಗಿ ಬೇಸಿಗೆಯ ಬಿಸಿಲಿನಿಂದ ತತ್ತರಿಸಿದ್ದಂತ ಜನರಿಗೆ ತಂಪನೆರದಂತೆ ಆಗಿದೆ.
ಬೆಂಳೂರಿನ ಶಾಂತಿನಗರ, ಕಾರ್ಪೋರೇಷನ್, ರಿಚ್ಮಂಡ್ ಸರ್ಕಲ್ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಮಳೆಯಾಗುತ್ತಿದೆ.ಕೆ ಆರ್ ಮಾರ್ಕೆಟ್, ಬೆಂಗಳೂರಿನ ಹೃದಯಭಾಗವಾದಂತ ಮೆಜೆಸ್ಟಿಕ್ ಸೇರಿದಂತೆ ಇತರೆಡೆ ಮಳೆಯಾಗುತ್ತಿದೆ. ದಿಢೀರ್ ಸುರಿಯುತ್ತಿರುವಂತ ಮಳೆಯಿಂದಾಗಿ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.