ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಆರಂಭವಾಗಿದ್ದು, ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ‍್ಸ್ ಮುಂಬೈ ಹೀರೋಸ್ ತಂಡವನ್ನು ಮಣಿಸಿದೆ.
ಹತ್ತು ಓವರ್‌ಗಳಿರುವ ಈ ಪಂದ್ಯದಲ್ಲಿ ರಿತೇಶ್ ದೇಶ್‌ಮುಖ್ ನಾಯಕತ್ವದ ಬಾಲಿವುಡ್ ತಂಡವನ್ನು ಸುದೀಪ್ ತಂಡ ಮಣಿಸಿದೆ.
18 ಎಸೆತಗಳಲ್ಲಿ ಡಾರ್ಲಿಂಗ್ ಕೃಷ್ಣ 55 ರನ್‌ಗಳನ್ನು ಕಲೆ ಹಾಕಿ ಹಾಫ್ ಸೆಂಚುರಿ ಗಳಿಸಿದ್ದರು. ಕರ್ನಾಟಕ ತಂಡದ ಮೊತ್ತ ರೀಚ್ ಮಾಡಲಾಗದೆ ಬಾಲಿವುಡ್ ತಂಡ ಸೋಲೊಪ್ಪಿಕೊಂಡಿತು.