ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಹೆಬ್ರಿ ತಾಲೂಕಿನ ನೆಲ್ಲಿಕಟ್ಟೆ ಕ್ರಾಸ್ ಬಳಿಯ ಸೀತಾ ನದಿಯಲ್ಲಿ ಈಜಲು ಇಳಿದಿದ್ದ ಸ್ನೇಹಿತರಿಬ್ಬರು ಮೃತಪಟ್ಟಿದ್ದಾರೆ.
ಸರಿಯಾಗಿ ಈಜು ಬಾರದೇ ನದಿಯಲ್ಲಿ ಇಳಿದಿದ್ದ ಶಿವಮೊಗ್ಗ ಮೂಲದ ದೀಪಕ್ ಹಾಗೂ ಶಿನು ಡೇನಿಯಲ್ ಮೃತಪಟ್ಟಿದ್ದಾರೆ.
ದೀಪಕ್ ಶೃಂಗೇರಿಯಲ್ಲಿ ವೈದ್ಯರಾಗಿದ್ದು, ಶಿನು ಶಿವಮೊಗ್ಗದ ಟೈಯರ್ ರಿಸೋಲ್ ಸೆಂಟರ್ ಉದ್ಯೋಗಿಯಾಗಿದ್ದರು. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದು, ಈಜು ಬಾರದೇ ನದಿಗೆ ಇಳಿದು ಮುಳುಗಿ ಮೃತಪಟ್ಟಿದ್ದಾರೆ.
ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.