ಸುಧಾಕರ್‌ಗೆ ಶೀಘ್ರವೇ ಜೈಲಿಗೆ ಹೋಗೋ ಸ್ಥಿತಿ ಬರಲಿದೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸುಧಾಕರ್ ಆರೋಗ್ಯ ಸಚಿವನಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ, ಎಲ್ಲ ದಾಖಲೆಗಳಿವೆ, ಶೀಘ್ರವೇ ಜೈಲಿಗೆ ಹೋಗೋದು ಗ್ಯಾರೆಂಟಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದು, ಭ್ರಷ್ಟರು ಸಂಸತ್​ಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ. ‌ಸುಧಾಕರ್ ಕುರಿತ ಹಗರಣದ ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ. ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಸುಧಾಕರ್​ ನೂರಕ್ಕೆ ನೂರಷ್ಟು ಜೈಲಿಗೆ ಹೋಗುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿಯಲ್ಲಿ ಮಂತ್ರಿಯಾಗಿ ಹಣ ಲೂಟಿ ಹೊಡೆದಿದ್ದಾನೆ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದೀರಿ. ರಾಜಕೀಯ ಲಾಭಿ ನಡೆಸಿ ಈ ಭಾರಿ ಎನ್.ಡಿ.ಎ ಟಿಕೆಟ್ ಪಡೆದಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!