ಕಾಡಾನೆ ಕಾರ್ಯಚರಣೆ ಯಶಸ್ವಿ: ನರಹಂತಕ ಕರಡಿ ಕಾಡಾನೆ ಸೆರೆ

ದಿಗಂತ ವರದಿ ಹಾಸನ :

ಜಿಲ್ಲೆಯ ಮಲೆನಾಡ ಭಾಗದಲ್ಲಿ ಉಪಟಳ ನೀಡುತ್ತಿರು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದ್ದು, ಇಂದಿನಿಂದ ಆರಂಭಗೊಂಡಿರುವ ಕರ್ಯಾಚರಣೆಯಲ್ಲಿ ನರಹಂತಕ ಕರಡಿ ಕಾಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕಾಡಾನೆ ಸೆರೆ ಇಂದಿನಿಂದ ಆರಂಭವಾಗಿದ್ದು, ಏ. 24 ವರೆಗೆ ನಡೆಯಲಿದೆ. ಇಂದು ಮೊದಲ ದಿನದ ಕಾಡಾನೆ ಕಾರ್ಯಾಚರಣೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ವಾಟೀಹಳ್ಳಿಯಲ್ಲಿ ಗ್ರಾಮದ ಐಬಿಸಿ ಎಸ್ಟೇಟ್‌ನಲ್ಲಿ ಸೆರೆಸಿಕ್ಕ ನರಹಂತಕ ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ. ಏಳು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ತಂಡ ನರಹಂತಕ ಕಾಡಾನೆ ಕರಡಿಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿ, ಅರ್ಧ ಗಂಟೆ ನಂತರ ಪ್ರಜ್ಞೆ ತಪ್ಪಿ ಬಿದ್ದ ನಂತರ ಕಾಡಾನೆಯನ್ನು ಸ್ಥಳಾಂತರದ ಕಾರ್ಯಕ್ಕೆ ಮುಂದಾದರು.

ಈ ನರ ಹಂತಕ ಕರಡಿ ಕಾಡಾನೆ ಜ.4 ರಂದು ಬೇಲೂರು ತಾಲ್ಲೂಕಿನ, ಮತ್ತಾವರ ಗ್ರಾಮದಲ್ಲಿ ವಸಂತ ಎಂಬಾತನನ್ನು ಬಲಿ ಪಡೆದಿತ್ತು. ಆದಾದ ಬಳಿಕೆ ಐವರ ಮೇಲೆ ಅಟ್ಯಾಕ್ ಮಾಡಿ ಆತಂಕ ಸೃಷ್ಟಿಸಿತ್ತು.

ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ನೇತೃತ್ವದಲ್ಲಿ ನಡೆದಿದ್ದು, ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಪ್ರಶಾಂತ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಮಹೀಂದ್ರ ಸಾಕಾನೆಗಳು ಭಾಗಿಯಾಗಿದ್ದವು. ಸೆರೆ ಹಿಡಿದ ನರಹಂತಕ ಕರಡಿ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!