VIDEO | ರಾಜ್ಯಸಭಾ ಸದಸ್ಯೆಯಾಗಿ ಕನ್ನಡದಲ್ಲಿ ಪ್ರಮಾಣ ವಚನ ಮಾಡಿದ ಸುಧಾಮೂರ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ಸಮಾಜ ಸೇವಕಿ ಸುಧಾ ಮೂರ್ತಿ ಅವರು ಇಂದು ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಮಾಡಿದ್ದಾರೆ.

ಕನ್ನಡದಲ್ಲಿಯೇ ಸುಧಾಮೂರ್ತಿ ಅವರು ಪ್ರಮಾಣ ವಚನ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಉಪರಾಷ್ಟ್ರಪತಿ ಜಗದೀಪ್​ ಧನಕರ್​ ಅವರ ಸಮ್ಮುಖದಲ್ಲಿ ಸುಧಾಮೂರ್ತಿ ಪ್ರಮಾಣ ವಚನ ಮಾಡಿದ್ದಾರೆ. ಈ ವೇಳೆ ಸುಧಾಮೂರ್ತಿ ಪತಿ ನಾರಾಯಣ ಮೂರ್ತಿ, ನಂದನ್​ ನೀಲಕೇಣಿ ಹಾಗೂ ಕೇಂದ್ರ ಸಚಿವ ಪಿಯುಷ್​ ಗೋಯಲ್​​ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!