ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಶಾರುಖ್ ಖಾನ್ ಒಡೆತನದ ಕೆಕೆಆರ್ ಗೆಲುವು ಕಂಡಿದ್ದು, ಈ ಬಾರಿಯ ಚಾಂಪಿಯನ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಮೂರನೇ ಗೆಲುವು ಕಂಡಿದೆ. ಶಾರುಖ್ ಖಾನ್ ಅವರು ಈ ಗೆಲುವನ್ನು ಮಕ್ಕಳಾದ ಸುಹಾನಾ ಖಾನ್, ಅಬ್ರಾಮ್ ಖಾನ್ ಹಾಗೂ ಆರ್ಯನ್ ಖಾನ್ ಜೊತೆ ಸಂಭ್ರಮಿಸಿದ್ದಾರೆ. ಶಾರುಖ್ ಸುಹಾನಾ ಖಾನ್ರನ್ನು ಹಗ್ ಮಾಡಿ ಖುಷಿಪಟ್ಟಿದ್ದು, ತಂದೆಯ ಖುಷಿಯನ್ನು ಕಂಡು ಸುಹಾನಾ ಖುಷಿಯಿಂದ ಕಣ್ಣೀರಿಟ್ಟಿದ್ದಾರೆ.
ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಅವರಿಗೆ ಶಾರುಖ್ ಖಾನ್ ಅವರು ಹಗ್ ಕೊಟ್ಟರು. ಜೊತೆಗೆ ಪ್ರೀತಿಯಿಂದ ಮುತ್ತಿಟ್ಟರು. ಗೌತಮ್ ಗಂಭೀರ್ ಅವರು ಕೆಕೆಆರ್ನ ಮೆಂಟರ್ ಆಗಿ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
Suhana’s tears are not only in the joy of #KKR‘s victory, but also in the love she feels for her father @iamsrk , we know from everything ShahRukh has been through during the last few years and every victory conquered is a reason for joy, he deserves each one of them, I love you pic.twitter.com/xIOkjZmywG
— SRKajol🇧🇷 (@SRKajolBrasil) May 26, 2024