ಸುಹಾಸ್ ಹತ್ಯೆ: ರಸ್ತೆಗಿಳಿಯದ ಬಸ್ , ರಿಕ್ಷಾಗಳು, ಅಂಗಡಿಗಳೂ ಬಂದ್, ಸಂಪುರ್ಣ ಮೌನಕ್ಕೆ ಜಾರಿದ ಮಂಗಳೂರು

ಹೊಸದಿಗಂತ ವರದಿ ಮಂಗಳೂರು:

ಹಿಂದು ಕಾರ್ಯಕರ್ತ ಸುಹಾಸ್ ಹತ್ಯೆ ಖಂಡಿಸಿ ಹಿಂದು ಸಂಘಟನೆಗಳು ನೀಡಿದ ಬಂದ್ ಕರೆಗೆ ವ್ಯಾಪಕ ಬೆಂಬಲ‌ ವ್ಯಕ್ತವಾಗಿದೆ. ಬಂದರು ನಗರಿ ಮಂಗಳೂರು ಸಂಪೂರ್ಣ ಸ್ತಬ್ದವಾಗಿದ್ದು, ವಾಹನ‌ ಜನಸಂಚಾರ ವಿರಳವಾಗಿದೆ.

ಬೆಳಗ್ಗೆ ಹಂಪನಕಟ್ಟೆ ಪರಿಸರದಲ್ಲಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದರ ಬೆನ್ನಿಗೇ ಖಾಸಗಿ ಬಸ್ ಗಳು ತಮ್ಮ ಓಡಾಟ ಸ್ಥಗಿತಗೊಳಿಸಿವೆ. ಇದರಿಂದಾಗಿ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.

ಎಲ್ಲೆಡೆ ಬಂದ್ ಬಂದ್ ಬಂದ್
ಮಂಗಳೂರಿನ‌ ಹೊರವಲಯ ತೊಕ್ಕೊಟ್ಟುವಿನಲ್ಲಿ ಹಿಂದು ಕಾರ್ಯಕರ್ತರು ಬೆಳಗ್ಗೆ ಅಂಗಡಿ ,ಮಳಿಗೆಗಳನ್ನು ಬಂದ್ ಮಾಡುವಂತೆ ಮಾಲೀಕರಲ್ಲಿ ವಿನಂತಿಸಿದ್ದಾರೆ. ಮಂಗಳೂರಿಗೆ ಬಾಡಿಗೆ ಹೊಡೆಯುತ್ತಿದ್ದ ರಿಕ್ಷಾಗಳನ್ನು ತಡೆದು ಚಾಲಕರಲ್ಲಿ ಬಂದಿಗೆ ಬೆಂಬಲ ನೀಡುವಂತೆ ಹೇಳಿದ್ದಾರೆ‌.

ಸಾರಿಗೆ ಬಸ್ಸುಗಳು ಓಡಾಟ ನಡೆಸದೆ ಉಳ್ಳಾಲ, ತೊಕ್ಕೊಟ್ಟು ಪ್ರದೇಶಗಳು ಖಾಲಿಯಾಗಿ ಬಿಕೋ ಎನ್ನುತ್ತಿದೆ.
ವಿಟ್ಲ, ಬಂಟ್ವಾಳ, ಪುತ್ತೂರು ಸಹಿತ ತಾಲೂಕು ಕೇಂದ್ರಗಳ ಪರಿಸರದಲ್ಲಿಯೂ ಬಂದ್ ಚಿತ್ರಣವೇ ಕಂಡುಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!