ಭಾರತದ ನಾಯಕನೊಬ್ಬನ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ರಷ್ಯಾದಲ್ಲಿ ಸೆರೆ ಸಿಕ್ಕ ಐಸಿಸ್‌ ಉಗ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರವಾದಿಯವರನ್ನು ಅವಮಾನಿಸಿದ್ದಕ್ಕಾಗಿ ಭಾರತದ ಆಡಳಿತ ವಲಯದ ನಾಯಕನೊಬ್ಬನ ವಿರುದ್ಧ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿ ಭಾರತಕ್ಕೆ ಪ್ರಯಾಣ ಬೆಳೆಸುತ್ತಿದ್ದ ಐಸಿಸ್‌ ಉಗ್ರನನ್ನು ರಷ್ಯದಲ್ಲಿ ಬಂಧಿಸಲಾಗಿದೆ.

ಪ್ರವಾದಿಯನ್ನು ಅವಮಾನಿಸಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಭಾರತದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದಾಗಿ ರಷ್ಯಾದಿಂದ ಬಂಧನಕ್ಕೊಳಗಾಗಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ವಿಡಿಯೋವೊಂದರಲ್ಲಿ ಒಪ್ಪಿಕೊಂಡಿದ್ದಾನೆ. ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ.

ಮಧ್ಯ ಏಷ್ಯಾ ಪ್ರದೇಶದ ದೇಶವೊಂದರ ಸ್ಥಳೀಯನಾದ ಈ ಭಯೋತ್ಪಾದಕನು ಭಾರತದ ಆಡಳಿತ ವಲಯದ ಪ್ರತಿನಿಧಿಗಳಲ್ಲಿ ಒಬ್ಬನ ವಿರುದ್ಧ ದಾಳಿಯನ್ನು ಯೋಜಿಸಿದ್ದ. ವರದಿಗಳ ಪ್ರಕಾರ, ಏಪ್ರಿಲ್ ನಿಂದ ಜೂನ್ ವರೆಗೆ, ಆರೋಪಿ ಟರ್ಕಿಯಲ್ಲಿದ್ದ, ಅಲ್ಲಿ ಅವನನ್ನು ಐಎಸ್ ನಾಯಕನೊಬ್ಬ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದ್ದ. ಟೆಲಿಗ್ರಾಮ್‌ನಲ್ಲಿ ಮತ್ತು ಇಸ್ತಾನ್‌ಬುಲ್‌ನಲ್ಲಿನ ವೈಯಕ್ತಿಕ ಸಭೆಗಳ ಮೂಲಕ ದೂರದಿಂದಲೇ ಈ ಯೋಜನೆಯನ್ನು ರೂಪಿಸಲಾಗಿತ್ತು ಎನ್ನಲಾಗಿದೆ.

“ರಷ್ಯಾ ಒಕ್ಕೂಟದ ಎಫ್‌ಎಸ್‌ಬಿ ಮಧ್ಯ ಏಷ್ಯಾ ದೇಶವೊಂದರ ಸ್ಥಳೀಯ ಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್ ಎಂಬ ಅಂತರರಾಷ್ಟ್ರೀಯ ಸಂಸ್ಥೆಯಿಂದ ರಷ್ಯಾದಲ್ಲಿ ನಿಷೇಧಿಸಲ್ಪಟ್ಟ ಸದಸ್ಯರನ್ನು ಗುರುತಿಸಿ ಬಂಧಿಸಿತು. ಆತ ಭಾರತದ ಆಡಳಿತ ವಲಯದ ಪ್ರತಿನಿಧಿಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ” ಎಂದು ರಷ್ಯಾದ ಪ್ರಕಣೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಉಲ್ಲೇಖಿಸಿ ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!