Monday, December 4, 2023

Latest Posts

ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಚಿನ್ನದ ಕಿರೀಟ ನೀಡುವ ಆಸೆ: ಜೈಲಿನಿಂದ ಪತ್ರ ಬರೆದ ಸುಕೇಶ್​ ಚಂದ್ರಶೇಖರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಹಣ ವರ್ಗಾವಣೆಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ನಟಿ ಜಾಕ್ವೆಲಿನ್​ಗೆ ಸದಾ ಪತ್ರ ಬರೆಯುತ್ತಾ ಇದ್ದವರು ಇದೀಗ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥರಿಗೆ ಎರಡು ಪುಟಗಳ ಪತ್ರ ಬರೆದಿದ್ದು, ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಚಿನ್ನದ ಕಿರೀಟ ನೀಡಲು ಬಯಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

916.24 ಕ್ಯಾರೆಟ್​ ಚಿನ್ನದಿಂದ ಮಾಡಲ್ಪಟ್ಟ, ಸುಮಾರು 11 ಕಿ.ಗ್ರಾಂ ತೂಕವಿರುವ ಕಿರೀಟವನ್ನು ಸುಕೇಶ್​ ಚಂದ್ರಶೇಖರ್​ ಅಯೋಧ್ಯೆಗೆ ನೀಡಲಿದ್ದಾರೆ. ಕಿರೀಟವು 101 ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ. ಒಂದೊಂದು ವಜ್ರವು 5 ಕ್ಯಾರೆಟ್​ ತೂಕವಿದೆ. ಅಲ್ಲದೇ, ಕಿರೀಟದ ಮಧ್ಯ ಭಾಗದಲ್ಲಿ ಇರುವ ಡೈಮಾಂಡ್​ 50 ಕ್ಯಾರೆಟ್​ ಗಾತ್ರದ್ದಾಗಿದೆ.

ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಆಭರಣ ವ್ಯಾಪಾರಿಗಳ ತಜ್ಞರ ಮಾರ್ಗದರ್ಶನದಲ್ಲಿ ಕಿರೀಟವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈ ಕಿರೀಟವನ್ನು ತಯಾರಿಸುವವರು, 1900ರ ಇಸವಿಯಿಂದ ಆಭರಣ ಕರಕುಶಲತೆಯಲ್ಲಿ ಅವರ ಪರಿಣತಿಗೆ ಹೆಸರುವಾಸಿಯಾಗಿದ್ದಾರೆ. ಭಗವಾನ್​ ಬಾಲಾಜಿ ತಿರುಮಲ ದೇವಸ್ಥಾನ ಸೇರಿದಂತೆ ವಿವಿಧ ಪವಿತ್ರ ದೇವಾಲಯಗಳಿಗೆ ಇವರೇ ಆಭರಣಗಳನ್ನು ರಚಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಚಂದ್ರಶೇಖರ್​ ಮತ್ತು ಅವರ ಕುಟುಂಬಕ್ಕೆ ಶ್ರೀರಾಮನ ಮೇಲಿನ ಅಚಲ ಭಕ್ತಿಯೇ ಈ ಭವ್ಯವಾದ ಕಾಣಿಕೆ ನೀಡಲು ಪ್ರೇರೇಪಿಸಿದೆ ಎಂದು. ಕಿರೀಟವನ್ನು ಅರ್ಪಿಸುವ ಅವಕಾಶ ಸಿಕ್ಕಿದ್ದು, ನನ್ನದೊಂದು ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಅವರ ಜೀವನದಲ್ಲಿ ಎಲ್ಲವೂ ಶ್ರೀರಾಮನ ಆಶೀರ್ವಾದದ ಪರಿಣಾಮವಾಗಿದೆ. ಕಿರೀಟವನ್ನು ಶ್ರೀರಾಮನಿಗೆ ನೀಡುವುದು ಅವರಿಗೆ ಮತ್ತು ಕುಟುಂಬಕ್ಕೆ ಮಹತ್ವದ ಮೈಲಿಗಲ್ಲು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸುಕೇಶ್​ ಚಂದ್ರಶೇಖರ್​ ಜೈಲಿನಲ್ಲಿ ಇರುವ ಕಾರಣ ಈ ಕಿರೀಟದ ಅಧಿಕಾರವನ್ನು ಅವರ ಕಾನೂನು ಸಲಹೆಗಾರ ಅನಂತ್​ ಮಲಿಕ್​ ಅವರಿಗೆ ನೀಡಿದ್ದಾರೆ. ಅವರು ಚಿನ್ನದ ಕಿರೀಟವನ್ನು ಟ್ರಸ್ಟ್​ಗೆ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಕಿರೀಟಕ್ಕೆ ಸಂಬಂಧಿಸಿದ ಅಗತ್ಯ ಬಿಲ್​ಗಳು, ರಶೀದಿಗಳು ಮತ್ತು ಪ್ರಮಾಣ ಪತ್ರಗಳನ್ನು ಒದಗಿಸುವುದು ಸೇರಿದಂತೆ ಎಲ್ಲಾ ಕಾನೂನು ಔಪಚಾರಿಕತೆಗಳನ್ನು ಪೂರೈಸಲಾಗಿದೆಯೇ ಎಂದು ಅನಂತ್​ ಮಲಿಕ್​ ಅವರು ಖಚಿತಪಡಿಸಿಕೊಳ್ಳುತ್ತಾರೆ. ಡಿಸೆಂಬರ್​ ಮೊದಲ ವಾರದ ವೇಳೆಗೆ ಚಿನ್ನದ ಕಿರೀಟ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!