ಕೇಜ್ರಿವಾಲ್ ವಿರುದ್ಧ ಸಿಬಿಐ ತನಿಖೆಗೆ ಕೋರಿ ಎಲ್ ಜಿಗೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಂಚನೆ ಪ್ರಕರಣದಲ್ಲಿ ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಬೆದರಿಕೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ತನಿಖೆಗೆ ಕೋರಿ ಲೆಫ್ಟಿನೆಂಟ್ ಗವರ್ನರ್ (ಎಲ್‌ ಜಿ) ವಿ ಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ತಾನು ಈ ಹಿಂದೆ ಎಲ್‌ಜಿಗೆ ನೀಡಿದ ದೂರಿನ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ, ಎಎಪಿ ನಾಯಕ ಸತ್ಯೇಂದ್ರ ಜೈನ್ ಮತ್ತು ಆಗಿನ ಡಿಜಿ ಸಂದೀಪ್ ಗೋಯೆಲ್ ಅವರ ಪರವಾಗಿ ಜೈಲು ಆಡಳಿತದಿಂದ ತನಗೆ “ತೀವ್ರ ಬೆದರಿಕೆ” ಬಂದಿದೆ ಎಂದು ಸುಖೇಶ್ ಆರೋಪಿಸಿದ್ದಾರೆ.
ಎಎಪಿ ನಾಯಕ ಜೈನ್ 2019 ರಲ್ಲಿ ಜೈಲಿನಲ್ಲಿ ತಮ್ಮ ಸುರಕ್ಷತೆಗೆ ಬದಲಾಗಿ 10 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್ ಕಳೆದ ತಿಂಗಳು ಎಲ್‌ಜಿಗೆ ಪತ್ರ ಬರೆದಿದ್ದರು. 2016 ರಲ್ಲಿ ಅಸೋಲಾದಲ್ಲಿರುವ ಜೈನ್‌ಗೆ ಅವರ ಫಾರ್ಮ್‌ಹೌಸ್‌ನಲ್ಲಿ 50 ಕೋಟಿ ರೂಪಾಯಿಗಳನ್ನು ತಲುಪಿಸಲಾಗಿದೆ ಎಂದು ಸುಕೇಶ್‌ ಹೇಳಿದ್ದಾರೆ. ನಂತರ ಕೇಜ್ರಿವಾಲ್ ಮತ್ತು ಇತರರು ಅವರನ್ನು ಹೋಟೆಲ್ ಹಯಾತ್‌ನಲ್ಲಿ ಭೋಜನಕ್ಕೆ ಭೇಟಿ ಮಾಡಿದರು.
ಎಎಪಿ ಆರೋಪಗಳನ್ನು ನಿರಾಕರಿಸಿದೆ ಮತ್ತು ಇದು ದಿಕ್ಕು ತಪ್ಪಿಸುವ ತಂತ್ರ ಎಂದು ಹೇಳಿದೆ. ತಮ್ಮ ಇತ್ತೀಚಿನ ಪತ್ರದಲ್ಲಿ, ಚಂದ್ರಶೇಖರ್, “ವಿಸ್ತೃತ ತನಿಖೆಯನ್ನು ಪ್ರಾರಂಭಿಸಲು ಸಿಬಿಐಗೆ ನಿರ್ದೇಶಿಸಿ ಮತ್ತು ಅದಕ್ಕಾಗಿ ಎಫ್‌ಐಆರ್ ದಾಖಲಿಸಲು ನನಗೆ ಅವಕಾಶ ಮಾಡಿಕೊಡಿ, ಏಕೆಂದರೆ ನನ್ನ ಮೇಲೆ ಒತ್ತಡವು ಹೆಚ್ಚಾಗುತ್ತಿದೆ ಮತ್ತು ಯಾವುದೇ ಅನಗತ್ಯ ಘಟನೆಗಳು ನಡೆಯಬಹುದು, ಅದಕ್ಕೂ ಮೊದಲು ಎಎಪಿ ಬಗ್ಗೆ ಸತ್ಯ ಬಹಿರಂಗಪಡಿಸಬೇಕು, ಏಕೆಂದರೆ ಈ ವಿಷಯವು ಜೈನ್ ಬಗ್ಗೆ ಮಾತ್ರವಲ್ಲ, ಅರವಿಂದ್ ಕೇಜ್ರಿವಾಲ್ ಮತ್ತು ಕೈಲಾಶ್ ಗಹ್ಲೋಟ್ ಕೂಡ ನಡೆದ ಎಲ್ಲಾ ಘಟನೆಗಳ ಭಾಗವಾಗಿದ್ದಾರೆʼ ಎಂದು ಅವರು ಎಲ್‌ಜಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ ನಂತರ ರಾಜಕೀಯಕ್ಕೆ ಸೇರಲು ಬಯಸುತ್ತಿದ್ದ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರನ್ನು ಕೇಜ್ರಿವಾಲ್ ಅವರಿಗೆ ನಾನೇ ಪರಿಚಯಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಎಲ್‌ಜಿಗೆ ಬರೆದ ಪತ್ರದಲ್ಲಿ ದಕ್ಷಿಣ ವಲಯದಲ್ಲಿ ತನಗೆ ಪಕ್ಷದ ಪ್ರಮುಖ ಸ್ಥಾನವನ್ನು ನೀಡುವ ಭರವಸೆಯ ಮೇಲೆ ಎಎಪಿಗೆ 50 ಕೋಟಿ ರೂ.ಗೂ ಹೆಚ್ಚು ಹಣವನ್ನು ನೀಡಿದ್ದೆ ಎಂದು ಸುಖೇಶ್‌  ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!